ರಟಕಲ್ ಮಠದಲ್ಲಿ ಹಂತಿ, “ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ” ಭರತನೂರ ಶ್ರೀ

ಕಾಳಗಿ: ರಟಕಲ್ ಜಾತಿ-ಮತಗಳನ್ನು ಮೀರಿ, ಪ್ರಕೃತಿಯನ್ನು ಆರಾಧಿಸುತ್ತಾ, 84 ಲಕ್ಷ ಜೀವಗಳುಗೆ ಆಹಾರ ಒದಗಿಸುವುದೇ ರೈತರ ಏಕೈಕ ಮತ್ತು ಶ್ರೇಷ್ಠ ಕೃಷಿ ಧರ್ಮವಾಗಿದೆ ಎಂದು ಮಾಜಿ ಜಿಪಂ ಸದಸ್ಯ ರಾಜೇಶ್ ಜಗದೇವ ಗುತ್ತೇದಾರ ಹೇಳಿದರು.ತಾಲೂಕಿನ ರಟಕಲ್ ರೇವಣಸಿದ್ದೇಶ್ವರ ಹಿರೇಮಠ ಲಿಂ.ಪೂಜ್ಯಶ್ರೀ ವಿರುಪಾಕ್ಷ ಶಿವಾಚಾರ್ಯರ 11ನೇ ಪುಣ್ಯ ಸ್ಮರಣೆ ಹಾಗೂ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯ ಪಟ್ಟಾಧಿಕಾರ ವಾರ್ಷಿಕೋತ್ಸವ, ನಿಮಿತ್ಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮೂರನೇ ದಿನದ ಪುರಾಣ ಕಾರ್ಯಕ್ರಮದಲ್ಲಿ ಹಂತಿ ರೈತರ ಸುಗ್ಗಿ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ಜರಗಿತ್ತು. ಶುಕ್ರವಾರ ಸಂಜೆ ಹಮ್ಮಿಕೊಂಡಿರುವ ಮಹಾದಾಸೋಹಿ ಶರಣಬಸವೇಶ್ವರ ಪುರಾಣ, ರಟಕಲ್ ಉತ್ಸವದ ನಿಮಿತ್ತ ರೈತರ ಸುಗ್ಗಿ-ಹಬ್ಬದಲ್ಲಿ ಭಾಗವಹಿಸಿ ನಂತರ ರೈತರನ್ನುದ್ದೇಶಿಸಿ ಮಾತನಾಡಿದರು. ಹಗಲು-ರಾತ್ರಿ ಎನ್ನದೆ, ಮಳೆ-ಬಿಸಿಲು ಲೆಕ್ಕಿಸದೆ ಭೂಮಿಯನ್ನು ನಂಬಿ ಬದುಕುವ ಅನ್ನದಾತ ತಾನು ಕಷ್ಟಪಟ್ಟು ಬೆಳೆದ ಬೆಳೆಯನ್ನು ಸಮಾಜಕ್ಕೆ ನೀಡಿ, ಹಸಿವು ಜೀವಿಸುವ ಕೆಲಸ ಶ್ರೇಷ್ಠವೆಂದು ಬಣ್ಣಿಸಿದರು.

ರಟಕಲ್ ಉತ್ಸವದ ನಿಮಿತ್ತ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಶರಣಬಸವೇಶ್ವರರ ಪುರಾಣದಲ್ಲಿ ಹಂತಿಯ ಸಂದರ್ಭದ ಬಂದ ಕಾರಣ ರಟಕಲ್ ಗ್ರಾಮದ ರೈತರೆಲ್ಲರು ಜೋ । ಜೋಳದ ಕಣವನ್ನು ಮಾಡಿ ಹಂತಿ ಹೂಡಿ

ಹೂಡಿ ಎತ್ತುಗಳ ಜತೆಗೆ ಜಾನಪದ ಸಂಗೀತ ನೃತ್ಯದೊಂದಿಗೆ ಹೆಜ್ಜೆಹಾಕಿದರು. ರಾಜೇಶ್ ಗುತ್ತೇದಾರ,ಜಿಲ್ಲಾ ರೈತ ನಾಯಕ ಶರಣಬಸಪ್ಪ ಮಮಶೆಟ್ಟಿ,ಪತ್ರಕರ್ತ ನಾಗರಾಜ ಗದ್ದಿ, ರೈತ ಮುಖಂಡರಾದ ಶಿವರಾಜ ಪಾಟೀಲ, ಮತ್ತು ವೀರಣ್ಣ ಗಂಗಾಣಿ ರವರು ರೈತರೋಂದಿಗೆ ಕುಣಿದು ಕುಪ್ಪಳಿಸಿದರು. ನಂತರ ವೇದಿಕೆ ಕಾರ್ಯಕ್ರಮ ಸಂದರ್ಭದಲ್ಲಿ ಶಹಬಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ ರವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು.ಭರತನೂರ, ಪೂಜ್ಯ ಚಿಕ್ಕಗುರುನಂಜೇಶ್ವರ ಮಸ್ವಾಮಿಗಳು, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ, ನಾನು ಒಬ್ಬ ರೈತ ಮೊದಲಿನ ಕಾಲದಲ್ಲಿ 8 ಎತ್ತುಗಳು ಕಟ್ಟಿದ್ದೇವೆ ಈಗ ಎರಡು ಎತ್ತು ಕಟ್ಟಿ ಒಕ್ಕಲುತನ ಮಾಡುತ್ತೇನೆ ಎಂದು ಹೇಳಿದರು, ಇವತ್ತಿನ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಹಂತಿ ಕಟ್ಟಿ ಹಂತಿ ಹೊಡೆಯೋ ಮೂಲಕ ಈಗಿನ ಪೀಳಿಗೆಗಳಿಗೆ ಹಂತೀಯತ್ತು ಬಿತ್ತು ಬೆಳೆ ಕೂರಿಗೆ ಹೀಗೆಲ್ಲ ತೋರಿಸಿಕೊಟ್ಟರು. ಇದೇ ರೀತಿ ತಾಲೂಕಿನಲ್ಲಿ ರೈತರ ಬಗ್ಗೆ ಗಮನ ಹರಿಸಿ ರೈತನಿಗೆ ಪ್ರೋತ್ಸಾಹಿಸಬೇಕೆಂದರು. ರೈತರಿದ್ದರೆ ಮಾತ್ರ ದೇಶ ಇಲ್ಲದಿದ್ದರೆ ಸುನ್ನೇ ಎಂಬ ಮಾತು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಮಾತನಾಡಿದರು. ಸುವರ್ಣಸುದ್ದಿವಾಹಿನಿಯ ಶರಣಯ್ಯ ಹಿರೇಮಠ, ಉದಯವಾಣಿ ಹಣಮಂತರಾವ ಬೈರಾಮಡಗಿ, ಶಹಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿದರು.ಹಿರೇಮಠದ ಪೀಠಾಧಿಪತಿ

ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು, ಪೂಜ್ಯಶ್ರೀ ಚಿದಾನಂದ ಶಿವಾಚಾರ್ಯರು, ಪೂಜ್ಯಶ್ರೀ ಚನ್ನಮಲ್ಲ ಮಹಾಸ್ವಾಮಿಗಳು, ಪೂಜ್ಯಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ಪೂಜ್ಯಶ್ರೀ ಶಿವ ಶಾಂತಲಿಂಗ ಶಿವಾಚಾರ್ಯರು, ರಟಕಲ್ ದೊಡ್ಡಮಠದ ಶ್ರೀ, ಗೌರಿಗುಡ್ಡದ ಶ್ರೀ, ಜಿಲ್ಲಾ ರೈತ ನಾಯಕ ಶರಣಬಸಪ್ಪ ಮಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.ಕಾಳಗಿ ತಾಲೂಕು ರಟಕಲ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಸುಗ್ಗ-ಹಬ್ಬ, ರಟಕಲ ಉತ್ಸವ, ಮಹಾದಾಸೋಹಿ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಹಂತಿ ಉತ್ಸವದಲ್ಲಿ ರೈತರೊಂದಿಗೆ ರಾಜೇಶ್ ಗುತ್ತೇದಾರ ರೈತರೊಂದಿಗೆ ಬೆರೆತು ಅವರೊಂದಿಗೆ ಹೆಜ್ಜೆ ಹಾಕಿದರು. ರೈತರಾದ, ಮಲ್ಲಣ್ಣ ಸೀಗಿ, ಪ್ರಭು ಮುಚ್ಚಳಾಂಬಿ, ಶಿವರಾಜ್ ಚೌಕ, ನೀಲಕಂಠ ಪಾಟೀಲ್, ನಾಗಪ್ಪ ಪೂಜಾರಿ, ಸೋಮಣ್ಣ ಡೋಣೂರ, ಮಹೇಶ ಬಿಜ್ಜನಳ್ಳಿ, ಶಾಂತಯ್ಯ ಕಿಣ್ಣಿ, ಭೀಮರಾವ್ ಕಂತಿ, ಕಾಶಪ್ಪ ಮೋಜುಗೇರಿ, ಸಿದ್ದರಾಮ ಸೆಳಗಿ, ಸುಬ್ಬಣ್ಣ ಮಕರಂಬಿ, ಬಸವರಾಜ್ ರಾವೂರ್, ಗಂಗಾಧರ ಕುಂಬಾರ್, ಕಂಟೆಪ್ಪ ಅರಣಕಲ್, ಭೀಮರಾವ್ ಚಿಕ್ಕಗ್ರಿ, ಪಮ್ಮಣ್ಣ ಬಳವಡಗಿ, ರಸೂಲ ಕೊರ್ಬಾ, ವೀರಣ್ಣ ಚಿಕ್ಕ ಆಗಸಿ, ದೇವೇಂದ್ರ ಹೊಟ್ಟೆನಮನಿ, ಸೈದಪ್ಪ ಹೊಲಸುಗೂಡು, ರವಿ ಬುಳ್ಳ, ಶರಣು ಹೊಳಗೇರಾ, ಅನಿಲ್ ಹೊಳಗೇರಾ, ಪ್ರಕಾಶ್ ಹಲಗಿ, ಇನ್ನು ಅನೇಕ ರೈತರು ಉಪಸ್ಥಿತರಿದೆ ಇದ್ದರು. ಮಲ್ಲಯ್ಯ ಕಿಣ್ಣಿ ಸಹ ಶಿಕ್ಷಕರು ನಿರೂಪಿಸಿದರು ವಂದಿಸಿದರು.

ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!