ಚಿಕ್ಕೋಡಿ : ಕರ್ನಾಟಕ ಪಂಚಾಯತ ರಾಜ್ಯ ಸೀಮಾ
ನಿರ್ಣಯ ಆಯೋಗವು ಗ್ರಾಪಂ ಚುನಾಯಿತರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಕ್ಷೇಪಣೆ ಇದ್ದಲ್ಲಿ 24ರೊಳಗಾಗಿ ಕರ್ನಾಟಕ ಪಂಚಾಯತ ರಾಜ್ ಸೀಮಾ ನಿರ್ಣಯ ಆಯೋಗವು ಸಲ್ಲಿಸಲು ಕೋರಿದೆ.
ಆಯೋಗ ಇದೆ ತಿಂಗಳಲ್ಲಿ ಚುನಾವಣೆ ನಡೆಸಲು ಇಚ್ಛಿಸಿತ್ತು.ಆದರೆ ಮೀಸಲಾತಿಯಿಂದಾಗಿ ಮುಂದೂಡಲಾಗಿದ್ದು ಬಹುತೇಕ ಅಕ್ಟೋಬರ ತಿಂಗಳಲ್ಲಿ ನಡೆಸುವ ಸಾಧ್ಯತೆ ಇದೆ. ಗಡಿ ಭಾಗದ ಚಿಕ್ಕೋಡಿ ತಾಲೂಕಿನಲ್ಲಿ 667 ಜನ ಸದಸ್ಯರು ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 498 ಜನ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದೆ.
ಚಿಕ್ಕೋಡಿ ತಾಲೂಕು ಗ್ರಾಪಂ ಸದಸ್ಯರ ಸಂಖ್ಯೆಯ ವಿವರ
ಇಂತಿದೆ: ವಾಳಕಿ-12, ಕಾಡಾಪುರ-16, ಚಂದೂರ-13,
ಹಿರೇಕೋಡಿ-30,ಮಾಂಜರಿ-27,ಅಂಕಲಿ -33,ಕೇರೂರ-41, ಪಟ್ಟಣಕುಡಿ-22, ಖಡಕಲಾಟ-35, ಕರೋಶಿ-22, ಬೇನಾಡಿ-20, ಯಡೂರ-20, ಇಂಗಳಿ-22, ನೇಜ-18. ಶಮನೇವಾಡಿ-16, ಚಿಂಚಣಿ-18, ಶಿರಗಾಂವ-19, ನಾಗರಮುನ್ನೋಳಿ-21, ಜಾಗನೂರ-31, ನಾಯಿಂಗ್ಲಜ-19, ಜೋಡಕುರಳಿ-15, ವಡ್ತಾಳ-13, ಬಂಬಲವಾಡ-17, ಕರಗಾಂವ-16,ಮುಗಳಿ-15 ಬೆಳಕುಡ-09, ಉಮರಾಣಿ-16, ನವಲಿಹಾಳ-16, ಕೋಥಳಿ-10, ಹತ್ತರವಾಟ-14, ಜೈನಾಪುರ-16, ನನದಿ-18, ಮಲಿಕವಾಡ-08. ಚಿಕ್ಕಲವಾಳ-17, ಜನವಾಡ -10 ಮತ್ತು ನಾಗರಾಳ-09 ಹೀಗೆ ಒಟ್ಟು 36 ಗ್ರಾಮ ಪಂಚಾಯತಿಗಳಲ್ಲಿ 667 ಜನ ಸದಸ್ಯರಿದ್ದಾರೆ.
ನಿಪ್ಪಾಣಿ ತಾಲೂಕು :ಕೋಡಿ-16,ಕೋಗನೊಳಿ-32,ಸೌಂದಲಗಾ-25,ಅಕ್ಕೋಳ-23,ಗಳತಗಾ-28,ಭೋಜ-27,ಮಾಂಗೂರ-19,ಕಾರದಾಗ -23,ಬೇಡಕಿಹಾಳ-29,ಕುರಲಿ -18,ಬೇನಾಡಿ -20,ಕುನ್ನೂರ -22,ಶಿರದವಾಡ-8,ಆಡಿ -19,ಮಾನಕಾಪೂರ- 25,ಯಮಗರ್ಣಿ -22,ಶಿರಗುಪ್ಪಿ -18, ಜಾತ್ರಾಟ-16,ಅಪ್ಪಚ್ಚಿವಾಡಿ -22,ಸೆಂಡೂರ -10,ಹುನ್ನರಗಿ -10,ಮಮದಪೂರ ಕೆ ಎಲ್ -10,ಲಖನಾಪೂರ-10,ಯರನಾಳ- 17,ಬಾರವಾಡ್- 08,ಸಿದ್ನಾಳ- 07,ಡೊಣೆವಾಡಿ ಹೀಗೆ ಓಟ್ಟು 27 ಗ್ರಾಮ ಪಂಚಾಯತಗಳಳ್ಲಿ 498ಜನ ಸದಸ್ಯರಿದ್ದಾರೆ.
