ರಟಕಲ್ ಬಂಕನಾಥನ ಮಂದಿರದಲ್ಲಿ,ಮಳೆಗಾಗಿ ಏಕ್ತಾರಿ ಸಪ್ತ ಭಜನೆ ಏಳು ದಿನ

ಕಾಳಗಿ :ತಾಲೂಕಿನ ರಟಕಲ್ ಗ್ರಾಮದ ರೈತರು ಮಳೆ ಬರದ ಕಾರಣ ಗ್ರಾಮದ ಬಂಕನಾಥೇಶ್ವರ ಮಂದಿರದಲ್ಲಿ 7ದಿನ ಏಕ್ತರಿ ಸಪ್ತಹ ಭಜನೆಯನ್ನು ಸಾನಿಧ್ಯ ಪರಮ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು, ಹಾಗೂ ಮುರುಗೇಂದ್ರ ಮಹಾಸ್ವಾಮಿಗಳು, ಹಾಗೂ ಕಮಿಟಿ ಅವರನೇತೃತ್ವದಲ್ಲಿ ನಡೆದು ಇಂದು ಪ್ರಾರಂಭಗೊಂಡಿದೆ ಅದರ ಪ್ರಯುಕ್ತ ರಟಕಲ್ ಗುಡ್ಡದಿಂದ ಶ್ರೀ ರೇವಣಸಿದ್ದೇಶ್ವರನಿಗೆ ಮಹಾಭಿಷೇಕ ಮಾಡಿ ರಟಕಲ್ ಗುಡ್ಡದಿಂದ ಮಾಯಮರ್ತಪ್ಪ ತ್ರಿಶೂಲ ಹಾಗೂ ಬಾಜಾ ಭಜಂತ್ರಿ ಡೊಳ್ಳು ನೊಂದಿಗೆ ಭವ್ಯ ಮೆರವಣಿಗೆ ಮುಖಾಂತರ ರಟಕಲ್ ಗ್ರಾಮದ ಹನುಮಾನ್ ದೇವಸ್ಥಾನಕ್ಕೆ ಆಗಮಿಸಲಾಯಿತು. ನಂತರ ತಾಯಂದಿರು ಕುಂಭ ಕಳಸ ದೊಂದಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮುಖಾಂತರ ಶ್ರೀ ಬಂಕನಾಥೇಶ್ವರ ದೇವಸ್ಥಾನಕ್ಕೆ ತಲುಪಿ, ಶ್ರೀ ಬಂಕನಾಥನಿಗೆ ಮಹಾಭಿಷೇಕ ಮಾಡಿ ನಂತರ ಏಕ್ತಾರಿ ಸಪ್ತಹ( ಓಂ ನಮಃ ಶಿವಾಯ) ಪ್ರಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ.ಸಿದ್ದರಾಮಣ್ಣ ಬಡಾ, ರುದ್ರಶೆಟ್ಟಿ ಗುರುಮಿಟ್ಕಲ್, ನಾಗರಾಜ್ ಏರಿ, ಜಗನ್ನಾಥ್ ಚೆಂಗಟಿ, ಮಲ್ಲಣ್ಣ ಸೇರಿ, ನಾಗಯ್ಯ ಬುಕ್ಕುಟಿಗಿ, ವಿಜಯಕುಮಾರ್ ಸರಡಗಿ, ಮಾನ್ ಶೆಟ್ಟಿ ಸಿಗಿ, ಮಹೇಶ್ ಬಿಜ್ಜನಹಳ್ಳಿ, ಕಾಶಿನಾಥ್ ಚೋಕ, ಶಾಂತಾಬಾಯಿ ಪಟ್ಟಣ, ಶಶಿಕಲಾ ಚೇಂಗಟ್ಟಿ, ರೆವಣಮ್ಮ ಕೊಡದೂರ್, ರಾಜಪ್ಪ ಕಿಣಿ, ನಾಗಯ್ಯ ದುದಗಿ, ರೈತ ಮುಖಂಡ ವೀರಣ್ಣ ಗಾಂಗಾಣಿ, ಮತ್ತು ಭಜನಾ ಮಂಡಳಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!