ಆಕಾಶ್ ಕೊರಳೆ ಅವರು ಗುರು ಪೂರ್ಣಿಮಾ ನಿಮಿತ್ಯ ಮಹಾರಾಷ್ಟ್ರದಲ್ಲಿ ಹವಾ ಮಲಿನಾಥ್ ಮಹಾರಾಜ ರವರಿಗೆ ವಿಶೇಷ ಪೂಜೆ

ಬಸವಕಲ್ಯಾಣ : ತಾಲೂಕಿನ ಹುಟ್ಟು ಹೋರಾಟಗಾರ ಹಾಗೂ ಸಮಾಜ ಸೇವಕ ಮಂಠಾಳ ಗ್ರಾಮದ ಯುವ ಮುಖಂಡರಾದ ಆಕಾಶ್ ಕೊರಳೆ ಅವರು ಗುರು ಪೂರ್ಣಿಮಾ ನಿಮಿತ್ಯ ಮಹಾರಾಷ್ಟ್ರದ ಬೀಗ್ವಾನ್ ದಲ್ಲಿರುವ ಹವಾ ಮಲಿನಾಥ್ ಮಹಾರಾಜಾ ಅವರ ಆಶ್ರಮದಲ್ಲಿ ಪೂಜ್ಯರಾದ ಹವಾ ಮಲ್ಲಿನಾಥ್ ಮಹಾರಾಜ್ ರವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜೀವನದಲ್ಲಿ ಗುರು ಮಹತ್ವ ಬಹಳ ದೊಡ್ಡದು ಅಂತ ಹೇಳಿದರು ಈ ಸಂದರ್ಭದಲ್ಲಿ ದೇವಾ ರಾಜುನೂರ್ ಅನಿಲ್, ಮಹೇಶ್ ಪವರ್ ಶೆಟ್ಟಿ, ನೀಲ್ಕಂಟ ಕಟರ್, ಪಟ್ಟೆ ಅಂಬರೀಶ್, ಕೊರಳೆ ರೋಹಿತ್ ಹಡಪದ್ ಹಾಜರಿದ್ದರು.

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ದೌಂಡ ತಾಲೂಕಿನ ಸುಕ್ಷೇತ್ರ ಬಿಗ್ವಾನ್ ಆಶ್ರಮದಲ್ಲಿ ಇಂದು ಗುರು ಪೂರ್ಣಿಮೆಯ ನಿಮಿತ್ಯ ಸಾವಿರಾರು ಸಂಖ್ಯೆಯಲ್ಲಿ ನಾನಾ ರಾಜ್ಯಗಳಿಂದ ದರ್ಶನ್ ಪಡೆಯಲು ಆಗಮಿಸಿದ ಸಕಲ ಭಕ್ತಾದಿಗಳಿಗೆ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ್ ನಿರ್ಗುಡಿ ಅಪ್ಪಾಜಿ ರವರು ದರ್ಶನದ ಜೊತೆಗೆ ಪ್ರಸಾದವನ್ನು ನೀಡುತ್ತ ಆಶೀರ್ವದಿಸಿದರು.

ವರದಿ : ಆದಿತ್ಯ ಗಜರೆ

error: Content is protected !!