ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸುವ ಕುರಿತು ಪ್ರತಿಭಟನೆ

ಘಟಪ್ರಭಾ ದಿಂದಾ ಸಂಕೇಶ್ವರ ವರೆಗೆ ಪ್ರತಿದಿನಾ ಬೆಳಿಗ್ಗೆ, ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸುವ ಕುರಿತು. ಘಟಪ್ರಭಾ ಮೃತ್ಯುಂಜಯ ಸರ್ಕಲದಲ್ಲಿ ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಘಟಪ್ರಭಾ ದಿಂದಾ ಸಂಕೇಶ್ವರ ಊರಿಗೆ ಪ್ರತಿದಿನಾ ಬೆಳಿಗ್ಗೆ ನೂರಾರು ಜನ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಸೇರಿದಂತೆ ಅನೇಕ ಜನರು ಘಟಪ್ರಭಾ ದಿಂದಾ ಸಂಕೇಶ್ವರ ಊರಿಗೆ ಕೆಲಸಕ್ಕಾಗಿ ಹಾಗೂ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಸ್ ಮೂಲಕ ಪ್ರಯಾಣಿಸುತ್ತಿದ್ದು. ಘಟಪುಭಾ ಪಟ್ಟಣದಲ್ಲಿ ರೇಲ್ವೆ ಸ್ಟೇಷನ್ ಹಾಗೂ ಅತಿದೊಡ್ಡ ಕೃಷಿ ಮಾರುಕಟ್ಟೆ ಹೊಂದಿರುವುದರಿಂದಾ ಜನದಟ್ಟನೆ ಅತಿ ಹೆಚ್ಚಾಗಿ ಇರುವುದರಿಂದಾ, ಹೆಚ್ಚುವರಿ ಬಸ್ ಸೌಲಭ್ಯ ಮಾಡುವ ಕುರಿತು, ಕೆ.ಎಸ್.ಆರ್.ಟಿ.ಸಿ ಕಡೆಯಿಂದಾ ಈಗಾಗಲೇ ಒಂದರೇಡು ಬಸ್ ಗಳಿದ್ದು ಅದು ಸರಿಯಾದ ಸಮಯಕ್ಕೆ ಬರುತ್ತಿರುವುದಿಲ್ಲಾ. ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ರವರ ಆದೇಶದಂತೆ ದಿನನಿತ್ಯ KAAMS ಮೂಲಕ ಹಾಜರಾತಿ ಕಡ್ಡಾಯಗೊಳಿಸಿದ್ದು, ಸರ್ಕಾರಿ ಅನಾನೂಕೂಲತೆಯಿಂದಾ ನೌಕರರಿಗೂ ಕೂಡಾ ಬಸ್ ಹಾಜರಾಗಲು ಸರಿಯಾದ ಸಮಯಕ್ಕೆ ಸಾಧ್ಯವಾಗುತ್ತಿರುವುದಿಲ್ಲಾ. ಪ್ರತಿ ದಿನಾ ಬೆಳಿಗೆ ಅಂದಾಜು 8.00 ಗಂಟೆಯಿಂದಾ 8.30 ರ ಒಳಗೆ ಹೆಚ್ಚುವರಿಯಾಗಿ ಎರಡು ಬಸ್ ಅನುಕೂಲ ಮಾಡಿಕೊಡಬೇಕೆಂದು ದಯಾಗಳಾದ ತಮ್ಮಲ್ಲಿ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತವೆ. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ವಕೀಲರು ಮಾತನಾಡಿ ಅನೇಕ ವಿದ್ಯಾರ್ಥಿಗಳಿಗೂ ಹಾಗೂ ಸರಕಾರಿ ನೌಕರಸ್ಥರಿಗೂ ಸಾರ್ವಜನಿಕರಿಗೂ ಅನುಕೂಲವಾಗುವ ದೃಷ್ಟಿಯಿಂದ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡಲು ಮಾನ್ಯ ಪೋಲಿಸ್ ಅಧಿಕಾರಿಗಳು ಘಟಪ್ರಭಾ ಠಾಣೆ ಇವರಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಯವರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕರವೇ ರಾಜ್ಯ ಉಸ್ತುವಾರಿ ಅಧ್ಯಕ್ಷ ತಮ್ಮಣ್ಣ ಅರಭಾಂವಿ, ಕನ್ನಡ ಸೇನೆ ತಾಲೂಕ ಅಧ್ಯಕ್ಷ ಅಪ್ಪಾಸಾಬ್ ಮುಲ್ಲಾ, ಕರವೇ ಜಿಲ್ಲಾ ಉಪಾಧ್ಯಕ್ಷ ಮಾರುತಿ ಚೌಕಾಶಿ, ಕರವೇ ಮೂಡಲಗಿ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ರಾಘವೇಂದ್ರ ಕುಡ್ಡೆಮಿ, ಘಟಪ್ರಭಾ ನಗರ ಘಟಕ ಅಧ್ಯಕ್ಷರಾದ ಯಲ್ಲಪ್ಪ ಅಟ್ಟಿಮಿಟ್ಟಿ. ಕರವೇ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಮಂಜುನಾಥ್ ಪಾಟೀಲ್, ರಾಜು ಗಾಡಿ ವಡ್ಡರ್, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಉಪಸ್ಥಿತರಿದ್ದರು

error: Content is protected !!