ಗುಡಸ ಗ್ರಾಮದ ಹಲವಾರು ಕಡೆ ಹಡಪದ ಸಮಾಜದ ಯುವಕರಿಂದ ಜಯಂತಿ ಆಚರಣೆ

ಹುಕ್ಕೇರಿ ಗುಡಸ ಗ್ರಾಮದ ನಾವಿ ತೋಟದಿಂದಾ ಪ್ರಾರಂಭವಾಯಿತು ಅಲ್ಲಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗುಡಸ ಅಲ್ಲಿಂದ ಬಸವೇಶ್ವರ್ ಆದರ್ಶ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗುಡಸ ಅಲ್ಲಿಂದ ಗ್ರಾಮ ಪಂಜಾಯತ ಗುಡಸ ಆಚರಿಸಿದರು ನಂತರ ಹಡಪದ ಅಜಣ್ಣವರ ಪರಿಚಯ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದವರು.
​ಬಸವಣ್ಣನವರ ಒಡನಾಡಿ: 12ನೇ ಶತಮಾನದ ಶರಣ ಚಳುವಳಿಯಲ್ಲಿ ಬಸವಣ್ಣನವರ ಬಲಗೈ ಬಂಟರಾಗಿ, ವಿಶ್ವದ ಪ್ರಪ್ರಥಮ ಸಂಸತ್ತು ಎನಿಸಿದ ‘ಅನುಭವ ಮಂಟಪ’ದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು.
ಇವರು ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು 250ಕ್ಕೂ ಹೆಚ್ಚು ಸಮಾಜಮುಖಿ ಮತ್ತು ವೈಚಾರಿಕ ವಚನಗಳನ್ನು ರಚಿಸಿದ್ದಾರೆ. ಇವರ ಧರ್ಮಪತ್ನಿ ಲಿಂಗಮ್ಮನವರು ಕೂಡ ಓರ್ವ ಶ್ರೇಷ್ಠ ವಚನಗಾರ್ತಿಯಾಗಿದ್ದು, ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ.
​ ಕಲ್ಯಾಣ ಕ್ರಾಂತಿಯ ನಂತರ ವಿಜಯಪುರ ಜಿಲ್ಲೆಯ ತಂಗಡಗಿ ಗ್ರಾಮದಲ್ಲಿ ಶರಣರು ಐಕ್ಯರಾದರು, ಅಲ್ಲೇ ಇವರ ಸಮಾಧಿಯೂ ಇದೆ. ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢಶಾಲೆಯ ಶಿಕ್ಷಕರು ಸಿಬಂದಿ ವರ್ಗದವರು ಮುದ್ದು ವಿದ್ಯಾರ್ಥಿಗಳು ಹಡಪದ ಸಮಾಜದ ಯುವಕ್ ಮಂಡಳಿಯವರು ಗ್ರಾಮ ಪಂಚಾಯತಿ ವರ್ಗದವರು ಆಡಳಿತ ಮಂಡಳಿಯವರು ಮತ್ತು ಮುಂತಾದವರು ಮತ್ತಿತರರು ಉಪಸ್ಥಿತರಿದ್ದರು

error: Content is protected !!