ವಿಜಯಪುರ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ವಾಹಿದ ಹುಸೇನ ಕೊತ್ವಾಲ್ ರವರು ಬಿಜಾಪುರ ನಗರದ ಗಾಂಧಿಚೌಕ ಪೊಲೀಸ ಠಾಣೆಗೆ, ಪೊಲೀಸ್ ನಿರೀಕ್ಷಕರಾಗಿ ವರ್ಗಾವಣೆ ಆಗಿದ್ದು, ಸಧ್ಯ ಅಧಿಕಾರ ಸ್ವೀಕರಿಸಿದ್ದಾರೆ.
ಖಡಕ್ ಹಾಗೂ ಜನಸ್ನೇಹಿ, ಮತ್ತು ದಕ್ಷ ಅಧಿಕಾರಿ ಬಿಜಾಪುರ ನಗರದ ಗಾಂಧಿ ಚೌಕ ಠಾಣೆಗೆ ಬಂದಿರುವದು ಜನರಲ್ಲಿ ಉಲ್ಲಾಸ, ಉತ್ಸಾಹ ಮತ್ತು ಸಂತಸವನ್ನ ಮೂಡಿಸಿದೆ.
ಮತ್ತು ನಗರದ ರೌಡಿಗಳಿಗೆ ನಡುಕ ಶುರುವಾಗಿದೆ.
ಈ ಹಿಂದೆ ಇವರು ಕಾರ್ಯ ನಿರ್ವಹಿಸಿದ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕತೆ, ಜನರ ಜೊತೆ ಜನ ಸ್ನೇಹಿಯಾಗಿ ಗುರುತಿಸಿ ಕೊಂಡಿದ್ದಾರೆ, ಮತ್ತು ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಒಟ್ಟಾರೆ ಇಂತಹ ದಕ್ಷ ಅಧಿಕಾರಿ ಗಾಂಧಿಚೌಕ ಪೊಲೀಸ ಠಾಣೆಗೆ ಬಂದಿರೋದು ಉತ್ತವಾಗಿದೆ ಎಂದು ಜನರು ಸಂತಸ ವ್ಯಕ್ತ ಪಡಿಸಿದ್ದಾರೆ…
ವರದಿ : ಅಜೀಜ ಪಠಾಣ್.
