ಗಜಾನನ ಉತ್ಸವ ಮಹಾಮಂಡಳ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ವಿಜಯಪುರ ಇವರ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ಪೂಜೆಯನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಬೃಹತ್ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಸಚಿವರು ಎಂ ಬಿ ಪಾಟೀಲ್ ಅವರು ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು , ತದನಂತರ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಸಚಿವರಿಗೆ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ಗಜಾನನ ಉತ್ಸವ ಮಹಾಮಂಡಳವು ಕಳೆದ ಎರಡು ದಶಕಗಳಿಂದ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಶಿಸ್ತುಬದ್ಧ ಒಂದು ಸಂಘಟನೆಯನ್ನು ಮತ್ತು ಕಾರ್ಯಕರ್ತರನ್ನು ಬೆಳೆದಿಸಿದ ಕೀರ್ತಿ ಮಾಜಿ ಸಚಿವರು ಅಪ್ಪು ಪಟ್ಟಣಶೆಟ್ಟಿ ಅವರಿಗೆ ಸಲ್ಲುತ್ತದೆ,
ಕರೊನಾ ಮಹಾಮಾರಿ ಸಂದರ್ಭದಲ್ಲಿ ನಮ್ಮ BLDE ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದೇ ರೀತಿ ಮಹಾಮಂಡಳ ಕೂಡ ತಾವು ಯಾವಾದಕ್ಕೂ ಕಮ್ಮಿ ಇಲ್ಲ ಎಂಬಂತೆ ಸತತ 54 ದಿನಗಳ ಕಾಲ ಕೋವಿಡ್ ರೋಗಿಗಳ ಪರಿಚಾರಕರಿಗೆ ಉಚಿತವಾಗಿ ಆಹಾರದ ಪೊಟ್ಟಣವನ್ನು ವಿತರಿಸುವ ಈ ಜಿಲ್ಲೆಯ ಕೀರ್ತಿಯನ್ನು ನಾಡಿನಾದ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದು ಇದೆ ಮಹಾಮಂಡಳ. ಹಾಗೂ ನಮ್ಮ ಕೋಟಿ ವೃಕ್ಷ ಅಭಿಯಾನಕ್ಕೆ ಬೆಂಬಲಿಸಿ ಈ ಮಹಾಮಂಡಳಕ್ಕೆ ಆಗವಿಸುವ ಗಣೇಶ ಭಕ್ತರಿಗೆ ಉಚಿತವಾಗಿ ಸರಿಸುಮಾರು ಹತ್ತು ಸಾವಿರ ಸಶಿಗಳನ್ನು ವಿತರಣೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶ ಉತ್ಸವಕ್ಕೆ ನಾಂದಿ ಹಾಡಿದರು ಎಂದರು,ಈ ಮಹಾಮಂಡಳ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಶ್ರೀ ಸಂಗಮೇಶ ಬಬಲೇಶ್ವರ, ಶ್ರೀ ಈರಣ್ಣ ಪಟ್ಟಣಶೆಟ್ಟಿ ಶ್ರೀ ಗೋಪಾಲ ಘಟಕಾಂಬಳೆ,ಸಿದ್ದು ಮಲ್ಲಿಕಾರ್ಜುನಮಠ, ಶ್ರೀ ಕಲ್ಲು ಗೌಡ ಹರನಾಳ, ಶ್ರೀ ಚಂದು ಉಮರ್ಜಿ, ಸಂತೋಷ ಪವಾರ , ಜಗದೀಶ ಮುಚಂಡಿ, ಸನ್ನಿ ಗವಿಮಠ ಆನಂದ್ ಮುಚಂಡಿ ,ಸಾಗರ ಅಡಿಕಿ ಹಾಗೂ ಪದಾಧಿಕಾರಿಗಳ ಉಪಸ್ಥಿತರಿದ್ದರು.
ವರದಿ ಅಜೀಜ್ ಪಠಾಣ.