ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಕರೆ
ಅಥಣಿ: ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನಡೆಯುತ್ತಿರುವ *ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ* ಇಂದು ಅಥಣಿ ನಗರಕ್ಕೆ ಆಗಮಿಸಿತು.
ಪೂಜ್ಯ ಬಂತೆ ಜೆನ್ ಮಾಸ್ಟರ್ ಡಾ. ಶಾಕು ಬೋಧಿಧಮ್ಮ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಅಥಣಿ ನಗರದಲ್ಲಿ ಭೀಮ್ ಅನುಯಾಯಿಗಳು ಹಾಗೂ ಬೌದ್ಧ ಬಂಧುಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಇಂದು ಮಧ್ಯಾಹ್ನ ದರೂರ್ ಮಾರ್ಗವಾಗಿ ಅಥಣಿ ಪ್ರವೇಶಿಸಿದ ಯಾತ್ರೆಯು *ಟಿಪ್ಪು ಸುಲ್ತಾನ್ ಸರ್ಕಲ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್, ಗೌತಮ ಬುದ್ಧ ಸರ್ಕಲ್ ಮಾರ್ಗವಾಗಿ ಸಾಗಿ ಕನಕ ನಗರದ ಬುದ್ಧ ವಿಹಾರ ತಲುಪಿತು.
ಬುದ್ಧ ವಿಹಾರದಲ್ಲಿ ನಡೆದ ಧಮ್ಮ ಸಭೆಯಲ್ಲಿ ಪೂಜ್ಯ ಬಂತೆಜಿ ಅವರು ಗೌತಮ ಬುದ್ಧರ ವಿಚಾರಧಾರೆಗಳು, ಅಂಬೇಡ್ಕರ್ ರವರ ಸಂವಿಧಾನದ ಮೌಲ್ಯಗಳು, ಸಮಾನತೆ, ಸಾಮಾಜಿಕ ನ್ಯಾಯ, ಶಾಂತಿ ಮತ್ತು ಬೌದ್ಧ ಧಮ್ಮದ ಜಾಗೃತಿಯ ಕುರಿತು ಮನಮುಟ್ಟುವಂತೆ ವಿವರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಾರ್ಥ ಶಿಂಗೆ, ರವಿ ಕಾಂಬಳೆ, ಸಂಜು ಕಾಂಬಳೆ, ವಿಜಯಕುಮಾರ ಕಾಂಬಳೆ,ಕುಮಾರ ಐದನ್ನವರ, ಹನುಮಂತ ಕಾಂಬಳೆ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಬೌದ್ಧ ಉಪಾಸಕರು, ಭೀಮ್ ಅಭಿಮಾನಿಗಳು, ಯುವಕರು ಉಪಸ್ಥಿತರಿದ್ದರು.
