ಪಂಜಾಬ್‌ | ಚಲಿಸುತ್ತಿದ್ದ ರೈಲಿನ 4 ಬೋಗಿಗಳಲ್ಲಿ ಬೆಂಕಿ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಚಂಡೀಗಢ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನ 4 ಬೋಗಿಗಳು ಬೆಂಕಿ ಹೊತ್ತಿ ಉರಿದ ಘಟನೆ ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ಬಸಂತಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

12508 ಸಂಖ್ಯೆಯ ರೈಲು ಅಮೃತಸರದಿಂದ ನ್ಯೂ ಜಲ್ಪೈಗುರಿಗೆ ತೆರಳುತ್ತಿತ್ತು. ಸುಮಾರು ಮಧ್ಯಾಹ್ನ 1:10ರ ವೇಳೆಗೆ ರೈಲಿನ ಬೋಗಿಗಳಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಎಂಜಿನ್‌ನಿಂದ 5ನೇ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲೋಕೋ ಪೈಲಟ್‌ ರೈಲು ನಿಲ್ಲಿಸಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಲೋಕೋ ಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಯಾರಿಗೂ ಗಾಯಗಳಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರೈಲು ಸಿಬ್ಬಂದಿ ಬೆಂಕಿ ಹೊತ್ತಿದ್ದ ಕೋಚ್‌ಗಳನ್ನು ರೈಲಿನಿಂದ ಬೇರ್ಪಡಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

error: Content is protected !!