ಶಾಸಕ ಡಾ. ಸಿದ್ದು ಪಾಟೀಲ್ ಅವರಿಗೆ ತಾಳಮಡುಗಿ ಗ್ರಾಮಸ್ಥರಿಂದ ಸನ್ಮಾನ

ಹುಮನಾಬಾದ್: ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಸಿದ್ದು ಪಾಟೀಲ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ತಾಳಮಡುಗಿ ಗ್ರಾಮದ ಸುನಿಲ್ ಸಾಹೇಬ್ ಅವರು ಶುಕ್ರವಾರ ಶಾಸಕರ ಗೃಹ ಕಚೇರಿಗೆ ತೆರಳಿ ಶಾಸಕರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಅಧ್ಯಕ್ಷ ಹಾಜಿ, ಶೌಕತ್ ಅಲಿ ಮೋಜನ್, ಪ್ರಭು ಲಂಬುನೋರ, ಲೋಕೇಶ್ ಭಾವಿದೊಡ್ಡಿ, ನೂರಲಿ ಖಾನ್ ಪಟೇಲ್, ಶ್ರೀಮಂತ ಭಾವಿದೊಡ್ಡಿ, ಜಗದೀಶ್ ಭಾವಿದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!