ತಮಿಳುನಾಡು ಜನತೆಗೆ ವಿಜಯ್ ದೀಪಾವಳಿ ಬಂಪರ್ ಗಿಫ್ಟ್; 100 ರೂ ಗೆ ವೆಟ್ರಿ ವಿಶೇಷ ತರಕಾರಿ ಕಿಟ್!

ಚೆನ್ನೈ: ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಗುರುವಾರ ರಾಜ್ಯದ ಜನತೆಗೆ ದೀಪಾವಳಿಗೆ ಬಂಪರ್ ಗಿಫ್ಟ್ ಘೋಷಿಸಿದ್ದು, ‘ವೆಟ್ರಿ ಸ್ಪೆಷಲ್ ವೆಜಿಟೇಬಲ್ ಪ್ಯಾಕ್’ ಯೋಜನೆ ಆರಂಭಿಸಿದೆ.

ತಮಿಳುನಾಡು ಸರ್ಕಾರ, ದೀಪಾವಳಿಗೂ ಮುನ್ನ ಅತ್ಯಂತ ಕಡಿಮೆ ದರದಲ್ಲಿ (ಸಬ್ಸಿಡಿ ದರದಲ್ಲಿ) ಕೇವಲ 100 ರೂಪಾಯಿಗೆ 10 ಬಗೆಯ ಅಗತ್ಯ ಅಡಿಗೆ ತರಕಾರಿಗಳುಳ್ಳ 2.50 ಕೆಜಿ ಪ್ಯಾಕೆಟ್ ಅನ್ನು ನೀಡುವ ಯೋಜನೆ ಘೋಷಿಸಿದೆ.

ದೀಪಾವಳಿಯ ಸಮಯದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ‘ವೆಟ್ರಿ ವಿಶೇಷ ತರಕಾರಿ ಕಿಟ್’ ಯೋಜನೆಯನ್ನು ಪರಿಚಯಿಸಿದೆ.

ಚೆನ್ನೈನ ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ ಸಹಕಾರ ಸಚಿವ ವಿ. ಗಾಂಧಿರಾಜ್ ಅವರು ಈ ಯೋಜನೆಗೆ ಗುರುವಾರ ಚಾಲನೆ ನೀಡಿದ್ದಾರೆ.

error: Content is protected !!