ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೆರಲಿ ಪಂಚಾಯಿತಿಯಲ್ಲಿ ಬೆಳಗ್ಗೆ 10:26 ಗಂಟೆಯಾದರೂ ಕೂಡ ಯಾವುದೇ ಅಧಿಕಾರಿಯು ಅಲ್ಲಿ ಇರುವುದಿಲ್ಲ. ಅಲ್ಲಿಯ ಜನಗಳು ಅಧಿಕಾರಿಗಳು ಪಂಚಾಯಿತಿಗೆ ಹಾಜರ ಇಲ್ಲದೆ ಇರುವುದರಿಂದ ಪಂಚಾಯಿತಿಗೆ ಬಂದು ತಿರುಗಿ ಹೋಗುತ್ತಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ ಆದರೆ ಇಲ್ಲಿಯ ಪಿಡಿಓ ಸರ್ಕಾರದ ಸಂಬಳ ತಿಂದು ಸರಿಯಾಗಿ ಕೆಲಸಕ್ಕೆ ಬಾರದೇ ಇರುವುದು ವಿಪರ್ಯಾಸವೇ ಸರಿ. ಇದರ ಬಗ್ಗೆ ಪಿಡಿಓ ಗೆ ಕೇಳಿದರೆ ನನಗೆ ಊರಲ್ಲಿ ತುಂಬಾ ಕೆಲಸ ಇದೆ ಎಂಬ ಹಾರೈಕೆ ಉತ್ತರವನ್ನು ಕೊಟ್ಟಿರುತ್ತಾರೆ .ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವುದಂತೂ ಖಚಿತ. ಈಗಲಾದರೂ ಪಿಡಿಓ ಎಚ್ಚೆತ್ತುಕೊಂಡು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಬೇಕು ಎಂಬುದೇ ಇದರ ಉದ್ದೇಶ. ಟೈಮ ಇಲ್ಲದ ಅಧಿಕಾರಿ ಪಿಡಿಓ ಬಗ್ಗೆ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು ಯಾವ್ ರೀತಿಯ ಕ್ರಮ ತೆಗೆದುಕೊಳ್ಳುತ್ತಾರಾ ಅಥವಾ ಅವರು ಕೂಡ ಇದಕ್ಕೆ ಸಾತ್ ಕೊಡುತ್ತಾರಾಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ : ಸದಾನಂದ ಎಂ ಹೆಚ್