ಪ್ರತಿಯೊಬ್ಬರು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಬೇಕು : ಸೋಮನಾಥ ಪಾಟೀಲ

ಶಿವಮ್ ಫೌಂಡೇಶನ್ ವತಿಯಿಂದ 2026 ಕ್ಯಾಲೆಂಡರ್ ಬಿಡುಗಡೆ

ಬೀದರ : ಮನುಷ್ಯ ಕೇವಲ ಸ್ವಾರ್ಥಕ್ಕಾಗಿ ಬದುಕದೆನೆ ಕೈಲಾದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಮತ್ತು ಅವುಗಳಿಗೆ ಕೈಜೋಡಿಸಬೇಕೆಂದು ಬಿಜೆಪಿ ಜಿಲ್ಲಾದ್ಯಕ್ಷರಾದ ಸೋಮನಾಥ ಪಾಟೀಲ ಹೇಳಿದರು.

ನಗರದ ಶಿವಮ್ ಫೌಂಡೇಶನ್ ಕಛೇರಿಯಲ್ಲಿ ಫೌಂಡೇಶನ್ ಅದ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪಾಔರಾದೆ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 2026 ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕ್ಯಾಲೆಂಡರ್‌ನಲ್ಲಿರುವ ದಿನಗಳು, ತಿಥಿಗಳು ಹಾಗೂ ಮಾಸಗಳು ಬದಲಾದಂತೆ ನಮ್ಮ ಬದುಕು ಸಹ ಹೊಸತನ ಪಡೆದುಕೊಳ್ಳಬೇಕು ಆ ನಿಟ್ಟಿನಲ್ಲಿ ನಾವೆಲ್ಲರು ಉತ್ತಮ ದಿನಚರಿ ಹೊಂದಬೇಕು ಎಂದು ಹೇಳಿದರು.

ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಮಾಜಿ ಅದ್ಯಕ್ಷರಾದ ಪಂಡೀತ ಚಿದ್ರಿ ಮಾತನಾಡಿ ವಾತಾವರಣಕ್ಕೂ ಹೊಸತನವಿದೆ ಪಕ್ಷಿ–ಪ್ರಾಣಿಗಳು ನಿತ್ಯ ನವೋಲ್ಲಾಸದಿಂದ ಬದುಕು ಕಟ್ಟಿಕೊಳ್ಳುತ್ತವೆ ಇಂಥ ಸಂದರ್ಭದಲ್ಲಿ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು, ದುಶ್ಚಟಗಳನ್ನು ದೂರ ಮಾಡಿ ಮನಸ್ಸು ಹಗುರ ಮಾಡುವ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರ ಮೂಲಕ ಹೊಸ ವರ್ಷಕ್ಕೆ ಸಂಕಲ್ಪ ಮಾಡೋಣ ಈ ದಿಶೇಯಲ್ಲಿ ಪೀರಪ್ಪಾ ಔರಾದೆ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಅನೇಕರಿಗೆ ಮಾದರಿಯಾಗಿವೆ ಎಂದು ಹೇಳಿದರು.

ನಗರಸಭೆ ಸದಸ್ಯ ಶಶಿಧರ ಹೋಸಳ್ಳಿ ಮಾತನಾಡಿ ಪೀರಪ್ಪ ಔರಾದೆ ಅವರು ಶಿವಮ್ ಫೌಂಡೇಶನ್ ಮೂಲಕ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುವ ಮೂಲಕ ಮಾನೀಯತೆ ಮೆರೆದು ನಮಗೆಲ್ಲ ಪ್ರೇರಣೆಯಾವಗಿವೆ ಎಂದರು.

ಮಾಜಿ ಜಿಲ್ಲಾ ಪಂಚಾಯತ ಅದ್ಯಕ್ಷ ಬಾಬುರಾವ ಕಾರಬಾರಿ, ವಿಶ್ವ ಹಿಂದೂ ಪರಿಷದ್ ಅದ್ಯಕ್ಷ ವೀರಶೇಟ್ಟಿ ಖ್ಯಾಮಾ. ಗುರುನಾಥ ರಾಜಗೀರಾ,ಎಮ್.ಎಸ್ ಕಟಗಿ, ರತಿಕಾಂತ ಜೋಜನಾ, ಡಾ.ಶ್ರೀಕಾಂತ ಪಾಂಡ್ರೆ, ಜ್ಯೋತಿಷ ಔರಾದೆ, ರಾಜ್ ಟಗರು ಆಣದೂರ, ಗುರಪ್ಪ ಇಸ್ಲಾಂಪುರ, ಬಸಪ್ಪ ಸಂಗಮೆ, ಶಿವರಾಜ ಮಲ್ಕಾಪುರೆ ಸೆರಿದಂತೆ ಇತರರಿದ್ದರು.

error: Content is protected !!