ಲೆಬನಾನ:ಕಳೆದೆರಡು ದಿನಗಳಲ್ಲಿ ಲೆಬನಾನ್ ನಾದ್ಯಂತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಮತ್ತು ಪೇಜರ್ ಗಳು ಸ್ಫೋಟಗೊಂಡಿದ್ದರಿಂದ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರು ಬಳಸುವ ವಾಕಿ-ಟಾಕಿಗಳು ಬೈರುತ್ ನಲ್ಲಿ ಸ್ಫೋಟಗೊಂಡು ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಮೊನ್ನೆ ಕೊಲ್ಲಲ್ಪಟ್ಟವರಿಗಾಗಿ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆಯ ಬಳಿ ಬುಧವಾರದ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ.
ಲೆಬನಾನ್ ನಾದ್ಯಂತ ಹಿಜ್ಬುಲ್ಲಾ ಬಳಸುತ್ತಿದ್ದ ಸಾವಿರಾರು ಪೇಜರ್ ಗಳು ಸ್ಫೋಟಗೊಂಡು ಇಬ್ಬರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿ, ಸುಮಾರು 2,800 ಜನರು ಗಾಯಗೊಂಡ ಒಂದು ದಿನದ ನಂತರ ಈ ಸ್ಫೋಟಗಳು ನಡೆದಿವೆ.
ವರದಿ/ಸದಾನಂದ