ಹುಕ್ಕೇರಿ : ತಾಲೂಕಿನ ಪಾಶಾಪುರ ಗ್ರಾಮ ಪಂಚಾಯತಿಯಲಿ ಕಾರ್ಯಕ್ರಮ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಈ ಒಂದು ಸುಂದರ ಕಾರ್ಯಕ್ರಮದಲ್ಲಿ *ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸಬಹುದು ಪೋಷಣ ಮಾಸಾಚರಣೆಯ, ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು.ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಕೈಜೋಡಿಸಬೇಕು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಿದರು, ಪಾಶ್ಚಾಪುರ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಬಾಳವ್ವಾ ಅಡಿಮನಿ, ಉಪಾಧ್ಯಕ್ಷರಾದ ಕುಮಾರಿ -ಮಲಪುರಿ ಸುಣಕುಪ್ಪೆ ಸದಸ್ಯರಾದ ಶ್ರೀಮತಿ ಶಕುಂತಲ ಪಟ್ಟಣಶೆಟ್ಟಿ, ಗೀತಾ ಉಪ್ಪಾರ
ಮಾವನೂರ ಗ್ರಾ. ಪಂ. ಸದಸ್ಯರಾದ ಶ್ರೀ ಸತೀಶ್ ಕಮತಗಿ,ಪೌಷ್ಟಿಕ ಆಹಾರ ,ಕುರಿತು ಹೇಳಿದರು. ರುಸ್ತುಮ್ ಪುರ ಗ್ರಾ. ಪಂ. ಸದಸ್ಯರಾದ ಶ್ರೀ ನಾಗಪ್ಪ ಚನ್ನವರ, ಹಾಗೂ ಎಸಿಡಿಪಿಓ ಶ್ರೀ ಎನ್ ಎಸ್ ನಾಗಲೋಟಿ ಪೌಷ್ಟಿಕ ಆಹಾರ ಬಗ್ಗೆ ಮಾತನಾಡಿದರು.ಹಿರಿಯ ಮೇಲ್ವಿಚಾರಕಿಯರಾದ ಗೀತಾ ಕಾಂಬಳೆ ಬಾಲ್ಯ ವಿವಾಹ ಕುರಿತು ಮಾತನಾಡಿದರು. ,ವಲಯ ಮೇಲ್ವಿಚಾರಕಿಯರಾದ ಉಮಾಶ್ರೀ ತಳವಾರ,ಸ್ವಾಗತಿಸಿದರು, ಪ್ರತಿಭಾ ವಸ್ತ್ರದ ನಿರೂಪಿಸಿದರು .ಮೇಲ್ವಿಚಾರಕಿಯರಾದ, ಶ್ರೀಮತಿ ಕೆ ಎಸ್ ಮಾಳಗೆ, ಶ್ರೀಮತಿ -ಇಂದಿರಾ ಮಾದರ, ಶ್ರೀಮತಿ ಮಂಜುಳಾ ಹೆಗ್ಗ ನಾಯಕ ರವರು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಶ್ರೀ ಎಸ್.ಜಿ. ವಾರಿಮನಿಯವರು ಗರ್ಭಿಣಿಯರ ಬಾಣಂತಿಯರ ಆರೈಕೆ ಲಸಿಕೆ ಕುರಿತು ಹೇಳಿದರು. ಶ್ರೀಮತಿ ಶೋಭಾ ನವನಿ, ಶಿಕ್ಷಣ ಇಲಾಖೆಯಿಂದ ಶ್ರೀ ಎಸ್.ಜಿ. ಶಿಲ್ಲೆದಾರ ಮುಖ್ಯೋಪಾಧ್ಯಾಯರು KBS ಪಾಶ್ಚಾಪೂರ ಹಾಗೂ ಶಿಕ್ಷಕ ವೃಂದದವರು, ವಲಯದ ಕಾರ್ಯಕರ್ತೆ ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಬಾನಂತಿ ತಾಯಂದಿರು, ಮುದ್ದು ಮಕ್ಕಳು, ಗ್ರಾಮದ ಗುರು ಹಿರಿಯರು, ವಲಯ ಮೇಲ್ವಿಚಾರಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು. ಈ ಒಂದು ಮಾಸಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಅನ್ನಪ್ರಾಶನ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಅಂಗವಾಗಿ ಹೆಣ್ಣು ಮಕ್ಕಳ ಹುಟ್ಟುಹಬ್ಬ ಆಚರಣೆ, ತಾಯಿಯ ಹೆಸರಿನಲ್ಲಿ ಒಂದು ಲಕ್ಷ ( ಸಸಿ ನೆಡುವ ಕಾರ್ಯಕ್ರಮ ) ಅಂಗನವಾಡಿ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಂದ ವೇಷಭೂಷಣ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು .
ವರದಿ: ಸದಾನಂದ ಎಚ್