ಬೆಳಗಾವಿ: ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಂಟೇನರ್ ನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಧ್ಯರಾತ್ರಿ 1 ಗಂಟೆ ವೇಳಗೆ ಗೋವಾದಿಂದ ಮಹಾರಾಷ್ಟ್ರದ ಕಡೇಗೆ ಹೊರಟಿದ ಕಂಟೇನರ್ ನಲ್ಲಿ ಅಕ್ರಮ ಮದ್ಯ ಇರುವುದು ಪತ್ತೆಯಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಸೀಜ್ ಮಾಡಿ 40 ಲಕ್ಷಕ್ಕೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಆಯುಕ್ತ ಮಂಜುನಾಥ್ ಅವರು, ಮಧ್ಯರಾತ್ರಿ 1 ಗಂಟೆ ವೇಳಗೆ ಗೋವಾದಿಂದ ಮಹಾರಾಷ್ಟ್ರದ ಕಡೇಗೆ ಸಾಗುತ್ತೀದ ಕಂಟೇನರ್ ಲಾರಿಯನ್ನು ನಮ್ಮ ಅಬಕಾರಿ ರಕ್ಷಕ ಬಸವರಾಜ ವಾಹನ ತಪಾಸಣೆ ಮಾಡಿದ್ದಾರೆ , ಈ ವೇಳೆ ಚಾಲಕ ಪರಾರಿ ಆಗಿದ್ದಾನೆ ,ಅನುಮಾನಗೊಂಡ ವಾಹನ ತಪಾಸಣೆ ಮಾಡಿದಾಗ ನಕಲಿ ಮದ್ಯ ಇರುವುದು ತಿಳಿಯಿದೆ , ವಾಹನದಲ್ಲಿ 255 ಬಾಕ್ಸ್ ಗಳಲ್ಲಿ 3060 ಬಾಟಲಿಗಳನ್ನು ಸಾಗಿಸಲಾಗುತ್ತೀತು, ವಾಹನದ ಮೌಲ್ಯ 42 ಲಕ್ಷ ಹಾಗೂ ಮದ್ಯದ ಮೌಲ್ಯ 40 ಲಕ್ಷಕ್ಕೂ ಅಧಿಕ ಸೇರಿ ಒಟ್ಟು 84 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು .
ವಾಹನವೂ ಮಹಾರಾಷ್ಟ್ರದ ಠಾಣಾ ಜಿ.ಎಸ್.ಟಿ ಬಿಲ್ಲ ತೋರಿಸಲಾಗಿದೆ, ವಾಹನದಲ್ಲಿ ಮಧ್ಯದದಲ್ಲಿ ಪಾಸ್ಲಿಕ ಬಕೇಟ್ ಗಳನ್ನು ಸಾಗಾಟ ಮಾಡಲಾಗುತ್ತೀದೆ ಎನ್ನುವ ರೀತಿಯಲ್ಲಿ ಜಿ.ಎಸ್.ಟಿ ಬಿಲ್ ತಯಾರಿ ಮಾಡಿಕೊಂಡಿದ್ದರು ಎಂದು ಹೇಳಿದ್ದರು.