ಬೀಳಗಿ : ಅನಧಿಕೃತ ಗೈರು ಹಾಜರಿ ಉಳಿದ ಡಿ ದರ್ಜೆ ನೌಕರನನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲು ಐದು ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಎಂ ಪೋಳ ಮಂಗಳವಾರ ಲಂಚದ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೀಳಗಿ ತಾಲೂಕಿನ ಸುನಗ ಗ್ರಾಮದ ರಾಘವೇಂದ್ರ ತಂದೆ ವೀರಪ್ಪ ಮಡಿವಾಳ ಅನಧಿಕೃತ ಗೈರು ಹಾಜರಿ ಉಳಿದ ನಂತರ ಮರಳಿ ದಿನಾಂಕ:13/09/2024 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಕುರಿತು ಅರ್ಜಿ ಸಲ್ಲಿಸಿಕೊಂಡಿದ್ದು, ಅದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಾಗಲಕೋಟ ರವರು ಕರ್ತವ್ಯಕ್ಕೆ ಕರ್ತನ ಸೇರಿಸಿಕೊಳ್ಳಲು ಟಿಪ್ಪಣಿ ಮೂಲಕ ಸೂಚಿಸಿದರು.
ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಎಂ ಹೋಳ ಇಂದು ಬಾ ನಾಳೆ ಬಾ ಎಂದು ಕಚೇರಿಗೆ ಅಲೆದಾಡಿಸಿ ಐದು ಸಾವಿರ ರೂ ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದರು. ಈ ಕುರಿತು ರಾಘವೇಂದ್ರ ಮಡಿವಾಳ ಬಾಗಲಕೋಟೆ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದರು, ದೂರನ್ನ ಆಧರಿಸಿ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ವರ ಅವರ ನೇತೃತ್ವದಲ್ಲಿ ಸಿಪಿಐ ಬಸವರಾಜ ಭೋ ಲಮಾಣಿ, ಬಸವರಾಜ ಕೆ ಮುಕರ್ತಿಹಾಳ ಹಾಗೂ ಸಿಬ್ಬಂದಿಗಳಾದ ಬಸವರಾಜ ದೇಸಾಯಿ, ನಾಗಪ್ಪ ಪೂಜಾರಿ, ಸಿದ್ದು ಮುರನಾಳ, ಮಂಜು ಜೋಕೇರ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ, ಹಣಮಂತ ಹಲಗತ್ತಿ, ಶಿವಾನಂದ ಮುಷ್ಟಿಗೇರಿ ರಾಮನಗೌಡ ಗೌಡರ, ವಿ.ಜಿ.ರಾಜನಾಳ, ಶಶಿಧರ ಚುರ್ಚ್ಯಾಳ, ಮಹೇಶ ಹೊಸಗೌಡ್ರ, ವಿ.ಐ.ದೊಡಮನಿ, ಬಿ.ಎಚ್.ಮುಲ್ಲಾ, ಹಣಮಂತ ಮಾಸರಡ್ಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಖಾಜಾ ಮೈನೋದ್ದಿನ್ ತಹಸೀಲ್ದಾರ್