15 ವರ್ಷಗಳ ಸೇವೆ ಶ್ಲಾಘನೀಯ ಅದ್ಧೂರಿಯಾಗಿ ಬಿಳ್ಕೊಟ್ಟ ಹಳೆ ವಿದ್ಯಾರ್ಥಿ ಸಂಘ

ಔರಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ನರು ಉಪನ್ಯಸಕರ ವರ್ಗಾವಣೆ ಭಾವುಕರಾಗಿ ಬಿಳ್ಕೊಟ್ಟ ವಿದ್ಯಾರ್ಥಿ ಸಮೂಹ.

 

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ ನಳಗೆ ಮಾತನಾಡಿ ಸುಮಾರು 15 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿ ಗಳಿಗೆ ಉನ್ನತ ಸ್ಥಾನದ ದಾರಿ ತೋರಿಸಿ  ಕಾಲೇಜು ಅಭಿವೃದ್ಧಿಗೆ ಹಗಲಿರುಳು ದುಡಿದು ನ್ಯಾಕ  ಯಿಂದ ಬಿ ಗ್ರೇಡ್ ಮಾನ್ಯತೆ ಕೊಡಿಸಿ ತಮ್ಮ ಕುಟುಂಬ ಗಿಂತಲೂ ಹೆಚ್ಚು ಕಾಲೇಜು ಅಭಿವೃದ್ಧಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವಲ್ಲಿ ಸಕ್ರಿಯರಾಗಿ ಉತ್ತಮ ಸೇವೆ ಸಲ್ಲಿಸಿ ಕಡ್ಡಾಯ ವರ್ಗಾವಣೆಯಲ್ಲಿ ವರ್ಗಾವಣೆ ಗೊಂಡ ಅಚ್ಚುಮೆಚ್ಚಿನ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ  ಪ್ರೋ ಡಾ. ಜೈಶಿಲಾ  ಹಾಗೂ ಕನ್ನಡ ವಿಭಾಗದ ಉಪನ್ಯಸಕರಾದ ಪ್ರೋ ಡಾ. ಅಶೋಕ ಕೊರೆ  ಅವರಿಗೆ ಹಳೆ ವಿದ್ಯಾರ್ಥಿ ಸಂಘ ಎಂದೂ ಮರೆಯುವಂತಿಲ್ಲ ಗುರು ಶಿಷ್ಯರ ಸಂಬಂದ ಹೀಗೆ ಇರಲಿ ನಿಮ್ಮ ಮುಂದಿನ ವೃತ್ತಿ ಜೀವನ ಉದ್ಭವ ಲಿಂಗ ಅಮರೇಶ್ವರ ಅಶಿರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ ನಿಮ್ಮ ವರ್ಗಾವಣೆ ನಮ್ಮ ಕಾಲೇಜಿಗೆ ತುಂಬಲಾರದ ನಷ್ಟ ಎಂದು ಭಾವುಕ ನುಡಿ ನುಡಿದರು.

 

ಅದೆ ರೀತಿ ವಿದ್ಯಾರ್ಥಿ ಪರಿಷತ್ತಿನ ಮುಖಂಡ ಅಶೋಕ ಶೇಂಬೆಳ್ಳಿ ಮಾತನಾಡಿ ಈ ಹಿಂದೂಳಿದ ತಾಲ್ಲೂಕಿಗೆ ಸರ್ಕಾರಿ ಡಿಗ್ರಿ ಕಾಲೇಜು ಸಿಕ್ಕಿರೊದು ಅಪರೂಪ ಸರ್ಕಾರಿ ಪ್ರೌಢ ಶಾಲೆಯ ಎರಡು ಕೊಣೆಯ ಕಟ್ಟಡದಲ್ಲಿ ಕಾಲೇಜು  ಪ್ರಾರಂಭಿಸಿ ಮೂರು ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಸ್ವಂತ ಕಟ್ಟಡಕ್ಕಾಗಿ ವಿದ್ಯಾರ್ಥಿಗಳು ಹೋರಾಟಕ್ಕೆ ನಿಂತ ಸಂದರ್ಭದಲ್ಲಿ ಸರ್ಕಾರದ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಸ್ವಂತ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕಾಲೇಜು ಅಭಿವೃದ್ಧಿಗೆ ಹಗಲಿರುಳು ದುಡಿದು ಉತ್ತಮ ಸೇವೆ ಸಲ್ಲಿಸಿರಿ ನಿಮ್ಮ ಸೇವೆ ಶ್ಲಾಘನೀಯ ಎಂದು ನುಡಿದರು.

 

ಅದೇರಿತಿ ಹಳೆ ವಿದ್ಯಾರ್ಥಿ ಸಚಿನ ಪೂಲಾರಿ,ಸ್ನೇಹ ರೆಡ್ಡಿ,ಸಿದ್ದು ನಿರ್ಮಳೆ ಅಂತಿಮ‌ ವರ್ಷದ ವಿದ್ಯಾರ್ಥಿ ರತ್ನದೀಪ ಕಸ್ತೂರೆ ತಮ್ಮ ಭಾವುಕ ನುಡಿಗಳು ನುಡಿದರು.

 

ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲ ಗೊಳಿಸಿ ವರ್ಗಾವಣೆ ಗೊಂಡ ಗುರುಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ಸನ್ಮಾನಿಸಿ ಹೃದಯ ಪೂರ್ವಕ ಗೌರವವನ್ನು ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ವಿನಾಯಕ ಕೊತಮಿರೆ ವಹಿಸಿದರು, ಮುಖ್ಯ ಅಥಿತಿಗಳಾಗಿ ಹುಮನಾಬಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟರಾವ್ ,ಘೊಡಂಪಳ್ಳಿ ಕಾಲೇಜಿನ ಉಪನ್ಯಾಸ ಕರಾದ ಸಚಿದಸನಂದ ರೂಮ್ಮಾ,ಸಪ್ನಾ ಮಡಿವಾಳ,ಸಂತೋಷ ಕುಮಾರ ,ಅಥಿತಿ ಉಪನ್ಯಾಸಕರ ಸಂಘದ ಅಧ್ಯಕ್ಷ ದಯಾನಂದ ಬಾವಗೆ,ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ