ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಭವಾನಿ ಮಂದಿರದಲ್ಲಿ ನವರಾತ್ರಿ ಮಹೋತ್ಸವದ ನಿಮಿತ್ತ ಏರ್ಪಡಿಸಿದ ಅಖಂಡ ಹರಿನಾಮ ಸಪ್ತಾಹದಲ್ಲಿ ಅ.15ರಂದು ಭಾಗವಹಿಸಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಜ್ಞಾನೇಶ್ವರ ಗ್ರಂಥ ಗದ್ದುಗೆಗೆ ಪೂಜೆ ನೆರವೇರಿಸಿದರು. ಈ ವೇಳೆ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ತಂಡದೊAದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
ಭವಾನಿ ಬಿಜಲಗಾಂವ ದೇವಸ್ಥಾನ ಪುರಾತನ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಂದರ ದೇವಸ್ಥಾನವಾಗಿದೆ. ಭವಾನಿ ಮಾತೆ ಶಕ್ತಿಶಾಲಿ ದೇವತೆಯಾಗಿದ್ದಾರೆ. ಕಷ್ಟದಲ್ಲಿರುವ ಭಕ್ತರ ಸಮಸ್ಯೆಗಳೆಲ್ಲ ನಿವಾರಣೆಯಾಗಿ, ಜೀವನ ಸುಂದರವಾಗುತ್ತದೆ ಎಂದು ತಿಳಿಸಿದರು.
ಈ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಮಹೋತ್ಸವದ ನಿಮಿತ್ತ ಅಖಂಡ ಹರಿನಾಮ ಸಪ್ತಾಹ ನಡೆಸುತ್ತಾ ಬಂದಿರುವುದು ಉತ್ತಮ ಕೆಲಸವೆಂದು ಗ್ರಾಮಸ್ಥರ ಕೆಲಸವನ್ನು ವರ್ಣಿಸಿದರು. ಅಖಂಡ ಹರಿನಾಮ ಸಪ್ತಾಹವು ಯುವಕರಲ್ಲಿ ನಮ್ಮ ದೇಶದ ಕಲೆ, ಪರಂಪರೆಯನ್ನು ತಿಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖಂಡರಾದ ರಾಮಶೇಟ್ಟಿ ಪನ್ನಾಳೆ, ಶಿವಜಿರಾವ ಪಾಟೀಲ ಮುಂಗನಾಳ, ಸಂಜು ವಡೆಯರ್, ದಯಾನಂದ ಘೂಳೆ, ಶಿವರಾಜ ಅಲ್ಮಾಜೆ, ವೆಂಕಟರಾವ ಡೊಂಬಾಳೆ, ಬಾಲಾಜಿ ಡೊಂಬಾಳೆ ಸೇರಿದಂತೆ ಇತರರಿದ್ದರು.
ವರದಿ : ರಾಚಯ್ಯ ಸ್ವಾಮಿ