ಪಾಟ್ನಾ: ಬಿಹಾರದಲ್ಲಿ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳು ಲಭ್ಯವಾಗಲಿವೆ ಎಂದು ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಮುಜಫರ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ತೇಜಸ್ವಿ, “ನಾವು ಮುಂದಿನ ಸರ್ಕಾರ ರಚಿಸಿದರೆ 500 ರೂ.ಗೆ ಗ್ಯಾಸ್ ಸಿಲಿಂಡರ್‌ಗಳು ನೀಡುತ್ತೇವೆ” ಎಂದು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು “ರಿಮೋಟ್ ಕಂಟ್ರೋಲ್ ಮೂಲಕ” ನಡೆಸಲಾಗುತ್ತಿದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿಯ ಕೈಗೊಂಬೆ ಎಂದು ಆರೋಪಿಸಿದರು.
“ಆದರೆ, ಬಿಹಾರದಲ್ಲಿ ಮತಗಳನ್ನು ಕೇಳುತ್ತಾರೆ. ಆದರೆ ಕಾರ್ಖಾನೆಗಳನ್ನು ಮಾತ್ರ ಗುಜರಾತ್‌ನಲ್ಲಿ ಸ್ಥಾಪಿಸುತ್ತಾರೆ. ಹೊರಗಿನವರು(ಬಹರಿ) ನಿಯಂತ್ರಿಸುತ್ತಿರುವ ಈ ಸರ್ಕಾರವನ್ನು ನಾವು ಬಿಹಾರಿಗಳು ಕಿತ್ತೊಗೆಯಬೇಕು” ಎಂದು ಹೇಳಿದರು.
70 ವರ್ಷದ ಸಿಎಂ ನಿತೀಶ್ ಕುಮಾರ್‌ಗೆ ವ್ಯತಿರಿಕ್ತವಾಗಿ, ತಮ್ಮ ಯುವ ಆಕರ್ಷಣೆಯನ್ನು ಎತ್ತಿ ತೋರಿಸುವ ಪ್ರಯತ್ನದಲ್ಲಿ ಟಿ-ಶರ್ಟ್ ಧರಿಸಿ ಪ್ರಚಾರ ನಡೆಸುತ್ತಿರುವ ಆರ್‌ಜೆಡಿ ನಾಯಕ, ಜನಸಮೂಹ ‘ಯುವ ಕಿ ಸರ್ಕಾರ್’ ಪರವಾಗಿ ಘೋಷಣೆಗಳನ್ನು ಕೂಗುವಂತೆ ಮಾಡಿದರು.
