ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ 1ಕೋಟಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ರಹಿಮ ಖಾನ್

ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಇಸ್ಲಾಂಪೂರ್ ಗ್ರಾಮದಲ್ಲಿ ಸುಮಾರು 1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಪೌರಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಚಾಲನೆ ನೀಡಿದರು. ಇಸ್ಲಾಂಪುರ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಕೌಠಾ ಸೇತುವೆಯಿಂದ ಇಸ್ಲಾಂಪುರ ಗ್ರಾಮದವರೆಗೆ ಇಸ್ಲಾಂಪುರ ಗ್ರಾಮದ ಜನರ ಸುಗಮ ಸಂಚಾರಕ್ಕೆ 2023-24ನೇಯ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಡಿಯಲ್ಲಿ ಅಂದಾಜು 1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು, ನಗರ ಸಭೆಯ ಅಧ್ಯಕ್ಷರು, ಎಂ ಡಿ ಗೌಸೊದ್ದಿನ್. ಕಾಮಗಾರಿ ಗುತ್ತಿಗೆದಾರರು ಅನಿಲ್ ಕುಮಾರ್ ರಾಥೋಡ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!