ಹುಕ್ಕೇರಿ : ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಗೆ ಹಾಜರಾಗದ ಅಧ್ಯಕ್ಷರು
ಅಧ್ಯಕ್ಷರಿಲ್ಲದೆ ಅಧ್ಯಕ್ಷರ ಮಗನಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ
ಅಧ್ಯಕ್ಷರ ಬದಲಾಗಿ ಅಧ್ಯಕ್ಷರ ಮಗನ ದರ್ಪವೇ ಈ ಗ್ರಾಮ ಪಂಚಾಯತಿಯಲ್ಲಿ ಎದ್ದು ಕಾಣುತ್ತಿದೆ ಕೆಲಸ ಕಾರ್ಯಗಳನ್ನು ನೋಡದೆ ಇರುವ ಅಧ್ಯಕ್ಷರು ಈಗ ಮಹಾನುಭಾವರಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನೇ ಕಡೆಗಣಿಸಿದ್ದಾರೆ ಅಧ್ಯಕ್ಷರು ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದಂತೆ ಭಾಸವಾಗುತ್ತದೆ ನಮ್ಮ ಸರ್ಕಾರ ಎಂದಿನಿಂದಲೂ ಹೇಳುತಿದೆ ಯಾರು ಅಧ್ಯಕ್ಷರು ಇರುವರು ಅವರು ಮಾತ್ರ ಅಧಿಕಾರ ವನ್ನು ಚಲಾಯಿಸಿ ಎಂದು ಆದರೆ ಇಲ್ಲಿ ಸರಕಾರದ ಆದೇಶ ವನ್ನು ಗಳಿಗೆ ತೋರಿ ಅದೇ ರಾಗಾ ಅದೇ ಹಾಡು ಅನ್ನುವು ಹಾಗೆ ಆಗಿದೆ ಇದಕೆ ಉತ್ತರ ಅಲ್ಲಿಯ ಅಧಿಕಾರಿಗಳೇ ನೀಡಬೇಕು ಅಧ್ಯಕ್ಷರು ತಮ್ಮ ಗ್ರಾಮ ಪಂಚಾಯತಿಯಲ್ಲಿ ಮಾಡುವ ಕೆಲಸ ಕಾರ್ಯಗಳಿಗಿಂತ ಹೆಚ್ಚಾಗಿ ಕೇವಲ ಜಾತಿ ನಿಂದನೆ ಮಾತ್ರ ಹೆಚ್ಚಾಗಿ ಎದ್ದು ಕಾಣುತ್ತಿದೆ ಗ್ರಾಮದ ಪ್ರಥಮ ವ್ಯಕ್ತಿಯಾದ ಅಧ್ಯಕ್ಷರು ಗ್ರಾಮದ ಎಲ್ಲಾ ಜನರನ್ನು ಒಂದೇ ರೀತಿಯಲ್ಲಿ ನೋಡಬೇಕು ಅದನ್ನು ಬಿಟ್ಟು ಕೇವಲ ಇವರು ತಮ್ಮ ಸಮುದಾಯಕ್ಕೆ ಮಾತ್ರ ಬೆಲೆ ಕೊಡುವವರಾಗಿದ್ದು ಇನ್ನುಳಿದ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ಎದ್ದು ಕಾಣುತ್ತಿದೆ.
ವರದಿ : ಸದಾನಂದ್ ಎಚ್