ದಿವ್ಯಾಂಗ ಮಕ್ಕಳಿಗೆ ಅವಕಾಶ ನೀಡಿ – ಡಾ ಸಿದ್ದಾರ್ಥ್ ಮೆಳಕುಂದೆ.

 

ಬಿ ಆರ್ ಸಿ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ.

 

ಔರಾದ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ 1ನೇ ತರಗತಿಯಿಂದ 12ನೇ ತರಗತಿ ವರೆಗೆ ವ್ಯಾಸಂಗ ಮಾಡುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ

ಪಾಲಕರು ಮಕ್ಕಳಿಗೆ ವಿಶೇಷ ಪ್ರೀತಿ ಕಾಳಜಿ ನೀಡುವ ಮೂಲಕ ದಿವ್ಯಂಗ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶ ನೀಡಬೇಕು ಅನುಕಂಪ ಬೇಡ, ಕ್ರಮೇಣವಾಗಿ ಚಿಕಿತ್ಸೆ ನೀಡುವುದರಿಂದ ನ್ಯೂನತೆ ಗುಣಮುಖ ಆಗುತ್ತದೆ ಎಂದು ಡಾ ಸಿದ್ದಾರ್ಥ್ ಮೆಳಕುಂದೆ ಅಭಿಪ್ರಾಯ ಪಟ್ಟರು,

 

ಎಲ್ಲಾ ಪಾಲಕರು ಸಮರ್ಪಕವಾಗಿ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು , ದಿವ್ಯಾಂಗ ಮಕ್ಕಳ ಯುಡಿಐಡಿ ಕಾರ್ಡ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಪಾಲಕರಿಗೆ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕ ಡಾ ಶಾಲಿವಾನ ಉದಗಿರೆ ತಿಳಿಸಿದರು,

 

ತಾಲೂಕಿನ ಒಟ್ಟು 210 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದು, 76 ಮಕ್ಕಳು ಸಾಧನ ಸಲಕರಣೆಗೆ ಆಯ್ಕೆಯಾಗಿದ್ದಾರೆ,

 

ಡಾ ರಾಜಕುಮಾರ ಬುಕ್ಕಾ, ಡಾ ವೆಂಕಟರಮಣ, ಡಾ ಅಶ್ವಿನಿ ಬೋರಗೆ, ಡಾ ಪ್ರಮೋದಿನಿ,ಡಾ ಎಡಿ ಹಫೀಜ್, ಆರ್‌ಬಿಎಸ್‌ಕೆ ವೈದ್ಯರ ತಂಡ ಹಾಗೂ

ಬೆಂಗಳೂರಿನ ಅಲಿಂಕೋ ಸಂಸ್ಥೆಯ ತಜ್ಞರಾದ ಅಭಿಷೇಕ್,ಅಕ್ಷಯ್ ಅಮನ್,ಹಿಮನಶು, ಸಂಪನ್ಮೂಲ ಶಿಕ್ಷಕರಾದ ರಮೇಶ್ ಡುಂಬಾಳೆ, ಜ್ಞಾನೇಶ್ವರ್, ಶಾಮರಾವ ಪವಾರ ಪಾಲಕರು ಶಿಕ್ಷಕರು ದಿವ್ಯಾಂಗ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು,

 

ವರದಿ : ರಾಚಯ್ಯ ಸ್ವಾಮಿ

error: Content is protected !!