ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸಾಸರಗಾಂವ ಗ್ರಾಮದ ಹಾಳಾದ ರಸ್ತೆ ಹಾಗೂ ಚರಂಡಿಯ ಅವಸ್ಥೆ ಕೊನೆ ಇಲ್ಲದಂತಾಗಿದೆ, ಸಮಸ್ಯೆಗೆ ಹಲವಾರು ಬಾರಿ ಗ್ರಾಮಸ್ಥರು ಮೌಖಿಕವಾಗಿ ಮತ್ತು ಲಿಖಿತವಾಗಿ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ, ಇಂಥ ಚುನಾಯಿತ ಜನಪ್ರತಿನಿಧಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಗ್ರಾಮ ಉದ್ಧಾರ ಆಗಲು ಸಾಧ್ಯವೇ ? ಕಿವಿ ಇರದ ಕಣ್ಣು ಕಾಣದಂತಿರುವ ಇಂಥವರಿಗೆ ಬಡಜನರ ಕಷ್ಟಗಳೇನು ಅಂತ ಗೊತ್ತಾಗುವುದು ಇಲ್ಲ, ರಸ್ತೆ ಹಾದುಹೋಗುವ ಸಮಯದಲ್ಲಿ ಬಹಳಷ್ಟು ಮಂದಿ ಕಾಲುಜಾರಿ ಬಿದ್ದಿರುವ ಘಟನೆ ನಡೆದಿವೆ, ಕಾಲು ಮುರಿದುಕೊಂಡಿರುವ ಘಟನೆಗಳು ಆಗಿವೆ ಆದರೆ ಇವೆಲ್ಲ ಘಟನೆಗಳು ನಡೆದರೂ ಕೂಡ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವರ್ತನೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಈ ಕುರಿತು ಗ್ರಾಮಸ್ತೆ ಮಹಾದೇವಿ ಪ್ರತಿಕ್ರಿಯಿಸಿ ಹಲವು ವರ್ಷಗಳಿಂದ ನಮ್ಮ ಮನೆಯ ಪಕ್ಕದಲ್ಲಿ ಮತ್ತು ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನೀರು ರಸ್ತೆ ಮೇಲೆಲ್ಲಾ ಹರಿದಾಡಿ ತುಂಬಾ ತೊಂದರೆ ಉಂಟಾಗುತ್ತಿದೆ, ನಿತ್ಯ ಗಬ್ಬು ವಾಸನೆ ಬರುತ್ತಿದ್ದು ನಿತ್ಯ ನರಕಯಾತನೇ ಅನುಭವಿಸುತ್ತೇವೆ ಈಗಾಗಲೇ ಡೆಂಗ್ಯೂ ಮಲೇರಿಯಾ ಅಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತು ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ವೃದ್ದೆ ಹಾಗೂ ಮಕ್ಕಳು ಬಿದ್ದಿರುವ ಘಟನೆ ನಡೆದಿವೆ, ಹಲವು ಬಾರಿ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು ಕೂಡ ಯಾವ ಕ್ರಮ ಕೈಗೊಂಡಿಲ್ಲ ಇಂಥ ಅಧಿಕಾರಿಗಳನ್ನು ತಕ್ಷಣವೇ ವಜಾ ಗೊಳಿಸುವಂತೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್