“ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಶ್ರೀ ಡಿ .ವೀರೇಂದ್ರ ಹೆಗಡೆಯವರ 57ನೇ ಪಟ್ಟಾಭಿಷೇಕ ಮಹೋತ್ಸವ”

ಶ್ರೀ ಕ್ಷೇತ್ರ ಧರ್ಮಸ್ಥಳ:

 

ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗಡೆಯವರ 52ನೇ ಪಟ್ಟಾಭಿಷೇಕದ ಪ್ರಯುಕ್ತ ನಡೆದ ಛದ್ಮ ವೇಷ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನ ಗೊಂಡಿತು.

 

ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 

ಛದ್ಮ ವೇಷ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃಷಿಕ. ಬಿ

ಬಳಗ ಪ್ರಥಮ , ಆವಿಷ್ಕಾರ ಶೆಟ್ಟಿ ದ್ವಿತೀಯ ,ಹಾಗೂ ದೃತಿ ದಂಡುತಿ ತೃತಿಯ, ವಿರೂಪ ಗೌಡ ಪ್ರೋತ್ಸಾಹಕ ಬಹುಮಾನ ಪಡೆದರು.

 

ಪ್ರೌಢಶಾಲಾ ವಿಭಾಗದಲ್ಲಿ ಶಕ್ತಿಪ್ರಿಯಾ ತಂಡ ಪ್ರಥಮ, ಮಹಿಳಾ ವಿಭಾಗದಲ್ಲಿ ವಿಮಲ ಮತ್ತು ಬಳಗ ಪ್ರಥಮ, ಪುಷ್ಪ ಮತ್ತು ತಂಡ ದ್ವಿತೀಯ, ವನಿತಾ ಮತ್ತು ತಂಡ ತೃತೀಯ ಸ್ಥಾನಗಳನ್ನು ಪಡೆದರು.

 

ಸೀನಿಯರ್ ವಿಭಾಗದಲ್ಲಿ ದೈವಸ್ಥಾನ ಕೌಂಟರ್ ಬಳಗ ಪ್ರಥಮ, ಜನಾರ್ಧನ ಮತ್ತು ಬಳಗ ದ್ವಿತೀಯ ,ಸೂಪರ್ ಸೀನಿಯರ್ ವಿಭಾಗದಲ್ಲಿ ಸಾಮರ್ ಸೆಟ್ ತಂಡ ಹಾಗೂ ರಂಗ ಶಿವಕಲಾ ಬಳಗ ಪ್ರಥಮ ಸ್ಥಾನ ಪಡೆದುಕೊಂಡರು.

 

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ .ಹರೀಶ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಡಿ ಸಂಪತ್ತು ಸಾಮ್ರಾಜ್ಯ ಶೀರ್ತಡಿ ,ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧ ಎಂ . ಜಿನ ರಾಜ್ ಶೆಟ್ಟಿ ,ಪಿ ಜಯರಾಜ ಕಂಬಳಿ, ಜೀವನದರ್ ಕುಮಾರ್,ಕೆ

ಪ್ರದೀಪ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು ಇನ್ನಿತರರು ಭಾಗವಹಿಸಿದರು.

error: Content is protected !!