1ವರ್ಷ 10ತಿಂಗಳ ಚಿಕ್ಕ ವಯಸ್ಸಿನಲ್ಲೇ ದಾಖಲೆ ಕರ್ನಾಟಕ ಅಚೀವರ್ ಬುಕ್‌ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ಗಿಟ್ಟಿಸಿ ಕೊಂಡ jk ಕನ್ನಡ news ಸಂಪಾದಕರ ಮಗನ ಸಾಧನೆ

 

 

Jk ಕನ್ನಡ news ನಾ ಸಂಪಾದಕರು ಆಗಿರುವ ಸೈಯದ್ ಮೋಸಿನ ಅಲಿಯವರ ಸುಪುತ್ರ ಸಯ್ಯದ್ ತಯ್ಯಬ್ ಅಲಿ 2023ರ ಜ.1ರಂದು ಬಸವಕಲ್ಯಾಣದಲ್ಲಿ ಜನಿಸಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದವರು. 1ವರ್ಷ 10 ತಿಂಗಳ ವಯಸ್ಸಿನಲ್ಲಿ ತನ್ನ ಜ್ಞಾನ ತೋರಿಸುವ ಮೂಲಕ ಮಕ್ಕಳ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾನೆ. ಈತನ ಸಾಧನೆ ವಾರಗಳು ಕನ್ನಡ ಮತ್ತು ಆಂಗ್ಲ ದಲ್ಲಿ ಹೇಳಬಲ್ಲನು, ಇಂಗ್ಲಿಷ್‌ನಲ್ಲಿ ತಿಂಗಳುಗಳ ಹೆಸರು ಹಂತ ಹಂತವಾಗಿ ಹೇಳುತ್ತಾನೆ.

ಚಿತ್ರಗಳೊಂದಿಗೆ ವರ್ಣಮಾಲೆಗಳು, ತರಕಾರಿಗಳು, ಹಣ್ಣುಗಳು ಗುರುತಿಸುವುದು, ಸ್ವಾತಂತ್ರ್ಯ ಹೋರಾಟಗಾರ ಹೆಸರು ಹೇಳಿದರೆ ಭಾವಚಿತ್ರ ಗುರುತಿಸುವುದು, ಇಂಗ್ಲಿಷ್‌ನಲ್ಲಿ ದೇಹದ ಭಾಗಗಳು ಹೇಳಿದರೆ ಗುರುತಿಸುವನು, ಪ್ರಾಣಿಗಳನ್ನು ಗುರುತಿಸಿ ಪ್ರಾಣಿಗಳ ಹೆಸರು ಹೇಳಿದರೆ ಅವುಗಳ ಧ್ವನಿ ಮಿಮಿಕ್ರಿ ಮಾಡುತ್ತಾನೆ. ಅಷ್ಟೇ ಅಲ್ಲದೆ ಇಸ್ಲಾಂ ಕುರಿತ ಮಾಹಿತಿಯು ಈ ಪುಟಾಣಿಗಿದೆ ದಿನದ 5ಗಂಟೆ ಆಗುವ ನಮಾಜ್ ಗಳ ಹೆಸರು ಹೇಳ್ತಾನೆ ಇಸ್ಲಾಂ ಪ್ರಕಾರ ಬೆರಳು ಗಳ ಹೆಸರು ಹೇಳ್ತಾನೆ ಊಟ ಮಾಡುವಾಗ, ನೀರು ಕುಡಿಯುವಾಗ, ಮಲಗುವಾಗ ಮಾಡಬೇಕಾದ ಪ್ರಾರ್ಥನೆ ಹೇಳ್ತಾನೆ,

ಈ ಪುಟಾಣಿಯ ಕೌಶಲವನ್ನು ಕಂಡು ಕೆಎಬಿಆರ್ (ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್) ಹೆಮ್ಮೆಯಿಂದ ಗೌರವಿಸಿದೆ. ಈ 1ವರ್ಷ 10 ತಿಂಗಳ ಮಗುವಿನ ಸಾಧನೆಯನ್ನು ಗುರುತಿಸಿ ಕರ್ನಾಟಕ ಅಚೀವರ್ ಬುಕ್‌ ಆಫ್ ರೆಕಾರ್ಡ್‌ನಲ್ಲಿ ಆಯ್ಕೆಮಾಡಿ ಪ್ರಮಾಣ ಪತ್ರ ಮೆಡಲ್, ಅವಾರ್ಡ್ ಐಡಿ ನೀಡಿ ಗೌರವಿಸಿದೆ.

ಹೊಸ ವರ್ಷದಲ್ಲಿ ಕರ್ನಾಟಕ ಆಚಿವರ್ಸ್ ನಲ್ಲಿ ಈ ಪುಟಾಣಿಯ ಹೆಸರು ದಾಖಲಾಗಲಿದೆ ಎಂದು ತಿಳಿಸಿದ್ದಾರೆ.

 

ಈ ಪುಟಾಣಿಯ ಸಾಧನೆ ನಮ್ಮ jk ಕನ್ನಡ news ವತಿಯಿಂದ ಹರ್ಷ ವ್ಯಕ್ತಪಡಿಸಿ ವರದಿಗಾರರ ಹಾಗೂ ಪ್ರಮುಖರ ವತಿಯಿಂದ ಸಮಸ್ತ jk ಕನ್ನಡ news ತಂಡದಿಂದ ಹಾರ್ದಿಕ ಅಭಿನಂದನೆಗಳು ತಿಳಿಸುತ್ತೇವೆ.

error: Content is protected !!