ಹುಕ್ಕೇರಿ : ನಗರದ ಮಕಾಂದರ್ ಮ್ಯಾರೇಜ್ ಹಾಲಿನಲ್ಲಿ ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಧರ್ಮದ ಅರಿವು ಮೂಡಿಸಲು ಹುಕ್ಕೇರಿ ಪಟ್ಟಣದ ಜಮಿಯತ್ ಉಲಮಾ ಸಂಸ್ಥೆಯಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಹುಕ್ಕೇರಿ ತಾಲೂಕಿನ 160 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಮುಸ್ಲಿಂ ಧರ್ಮದ ಕುರಾನ್ ಪಠಣದ ಕುರಿತಾದ ಪರೀಕ್ಷೆಯಲ್ಲಿ ಮೊದಲ ಸ್ಥಾನಕ್ಕೆ 3.ಮಹಿಳೆಯರು ಆಯ್ಕೆಯಾಗಿದ್ದಾರೆ ಅವರಿಗೆ 10 ಸಾವಿರ ರೂ ಬಹುಮಾನ. 2ನೇ ಸ್ಥಾನಕ್ಕೆ ಕೂಡಾ 3. ಮಹಿಳೆಯರು ಆಯ್ಕೆಯಾಗಿರುತ್ತಾರೆ ಅವರಿಗೆ ರೂ.7000 ಬಹುಮಾನ. ಮೂರನೆಯ ಸ್ಥಾನಕ್ಕೆ ಮೂರು ಜನ ಮಹಿಳೆಯರು ಆಯ್ಕೆ ಮಾಡಿರುತ್ತಾರೆ ಅವರಿಗೂ ಕೂಡ 5000 ಬಹುಮಾನ ವಿತರಿಸಿದರು ಕುರಾನ್ ಅರಿವು ನೆರವು 9 ಮಹಿಳೆಯರನ್ನು. ಎ ಬಿ ಸಿ ಮುಖಾಂತರ ಆಯ್ಕೆ ಮಾಡಲಾಯಿತು
ಮಾಧ್ಯಮದವರೊಂದಿಗೆ ಮಾತನಾಡಿದ ಮೌಲಾನಾ ಸಲೀಂ ನಜವಿ ಸಾ “ಬೆಳಗಾವಿ ಮುಸ್ಲಿಂ ಮಹಿಳೆಯರಲ್ಲಿ ಧರ್ಮದ ಕುರಿತು ಆಸಕ್ತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪರ್ದೆ ಆಯೋಜನೆ ಮಾಡಲಾಗಿದೆ ಮುಸ್ಲಿಂ ಮಹಿಳೆಯರು ಆಧುನಿಕ ಜೀವನ ಶೈಲಿ ಬಿಟ್ಟು ಧರ್ಮದ ಬಗ್ಗೆ ತಿಳುವಳಿಕೆ ಹಾಗೂ ಕುರಾನ್ ಹಾಗೂ ಪಠ್ಯಪುಸ್ತಕಗಳನ್ನು ಓದುವುದು ಹವ್ಯಾಸ ಮಾಡ್ಕೋಬೇಕು ಎಂದು ಹೇಳಿದರು. ಬಹುಮಾನ ಕೊಟ್ಟವರು ಮೊದಲನೆಯ ಬಹುಮಾನ ಮೌಲಾನ ಸಲೀಂ ನಜವಿ ಇವರಿಂದ ಕುಮಾರಿ.ರಾಹತ್ ರಿಯಾಜಮ್ಮದ್ ಮುಜಾವರ್. ಎರಡನೆಯ ಬಹುಮಾನ ಮೌಲಾನ ಅಬ್ದುಲಾ ರೆಹಮಾನಿ ಸಾ” ಕೊಣ್ಣೂರ್. ಇವರಿಂದ ಕುಮಾರಿ ಸುವಯ್ಯ ಭಾಗವಾನ ಮೂರನೆಯ ಬಹುಮಾನ ಮೌಲಾನಾ ಮುಜಮುಲ್ ಭಾಗವಾನ್ ಸಾ” ಬೆಳಗಾವಿಇವರಿಂದ ಕುಮಾರಿಸಾಹಿಲ್ ಯಾದವಾಡೆ. ಹಾಗೂ ನರ್ಜತ್ ಮೋಮಿನ. ಸನಿಯಾ ಮಕಾಂದಾರ. ಲಜಿಯಾ ಬಾಗವಾನ. ಅಮರಿನ್ ಭಾಗವಾನ. ಸಾಹಿನ್ ಬಾಗವಾನ. ನಸ್ಸಿನ್ ಅತ್ತಾರ. ಇನ್ನುಳಿದ ಮಹಿಳೆಯರಿಗೆ ಡಾಲ್ ಹಾಗೂ ಪ್ರಮಾಣ ಪತ್ರ ವಿತರಿಸಿದರು ಈ ಸಂದರ್ಭದಲ್ಲಿ ಮೌಲಾನ ಅಪ್ರೋಜ್ ನವಾಜ್ ರಸಾದಿ. ಇರ್ಷಾದ್ ಬಾಗವಾನ. ಅಬ್ದುಲ್ಲಾ ಭಾಗವಾನ. ಡಿ ಆರ್ ಖಾಜಿ. ಶರೀಫ್ ಸಾಬ್ ಅಮ್ಮನಗಿ. ಮುಖಂಡರಾದ ಸಲೀಂ ನದಾಫ ಜಮಾತ್ ಅಧ್ಯಕ್ಷರು. ನಜೀರ್ ಅಹ್ಮದ್ ಮೊಮಿನ ದಾದಾ. ಇರ್ಷಾದ್ ಮುಕಾಶಿ. ಮೆಹಬೂಬ್ ಮುಲ್ಲಾ ಉಮರ್ ಫಾರೂಕ್ ಮುಲ್ಲಾ. ಅಬ್ದುಲ್ ಮುಕಾಂದಾರ. ಮುಸ್ಲಿಂ ಸಮಾಜದ ಹಿರಿಯರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.
ವರದಿ : ಸದಾನಂದ ಎಚ್