ಪಿಂಜಾರ/ನದಾಫ/ಮನಸೂರಿ ಮುಖಂಡರ ಸಮ್ಮಿಲನ!

ಲೋಕಾಪೂರ
ಅಖಿಲ ಭಾರತ ಪಿಂಜಾರ, ನದಾಫ್, ಮನಸೂರಿ ಸಂಘಗಳ ಮಹಾಮಂಡಳ ಹುಬ್ಬಳ್ಳಿ ಇದರ ರಾಜ್ಯ ಹಾಗೂ ಜಿಲ್ಲಾ ಘಟಕ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಸಲಾಯಿತು… ಸಮಾಜದ ಚಿಂತಕರು, ಮುಖಂಡರಲ್ಲಿ ಖುಷಿ ಎದ್ದು ಕಾಣ್ತಿತ್ತು…
ಮುಸ್ಲಿಂ ಸಮುದಾಯದಲ್ಲೇ ಹಿಂದುಳಿದ ಸಮಾಜದ ಮುಖಂಡರುಗಳ ಲೋಕಾಪೂರದಲ್ಲಿ ಸಮಾಗಮವಾಗಿತ್ತು… ಸಮಾಜದ ನೂರಾರು ಜನರಲ್ಲಿ ಸಂಭ್ರಮ ಮನೆಮಾಡಿತ್ತು… ಜ್ಞಾನೇಶ್ವರ ಮಠದ ಶ್ರೀ ಬ್ರಹ್ಮಾನಂದ ಮಹಾಸ್ವಾಮೀಗಳ ನೇತೃತ್ವದಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ಮಾಡಿ… ಇದೆ ವೇಳೆ ರಾಜ್ಯ ಹಾಗು ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು… ನೇಮಕವಾದ ಎಲ್ಲರಿಗೂ ಆದೇಶ ಪತ್ರ ನೀಡಿ ಶುಭಕೋರಲಾಯಿತು… ರಾಜ್ಯಾಧ್ಯಕ್ಷರಾಗಿ ಶ್ರೀ ಖಾಜಂಬರ ನದಾಫ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ಲಾಲಸಾಬ ನದಾಫ.ನೇಮಕಮಾಡಲಾಯಿತು.…
ಅಖಿಲ ಭಾರತ ಪಿಂಜಾರ, ನದಾಫ, ಮನಸೂರಿ ಸಂಘಗಳ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಪಕ್ರುದ್ದೀನ್ ಗೊರವನಕೊಳ್ಳ ಮಾತನಾಡಿ ಏಳಿಗೆಗೆ ಶ್ರಮಿಸೋದಾಗಿ ತಿಳಿಸಿದ್ರು… ಸಮಾಜದ ಮುಖಂಡರು ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡ್ರು… ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದ್ರು… ಜತೆಗೆ ಸಮಾಜದ ಯುವಕರು, ಹಿರಿಯ ಮಹಿಳೆಯರಿಗೂ ಗೌರವಿಸಿ ಪ್ರೋತ್ಸಾಹಿಸಿದ್ರು…
ಲೋಕಾಪೂರ ಹಿರೇಮಠದ ಡಾ.ಚಂದ್ರಶೇಖರ್ ಸ್ವಾಮಿಗಳು, ಪಿಂಜಾರ, ನದಾಫ್, ಮನಸೂರಿ ಸಮುದಾಯದ ನೂರಾರು ಬಾಂಧವರು, ನೂತನ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದ್ರು…

 

ವರದಿ,: ಅಜೀಜ ಪಠಾಣ .

error: Content is protected !!