ಕಬ್ಬು ಕಟಾವ್ ಮಷಿನ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ ಐವರು ದಾರುಣ ಸಾವು

ಕಾರ್ ಹಾಗೂ ಕಬ್ಬು ಕಟಾವು ಮಷೀನ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ ಐವರ ಸಾವನ್ನಪ್ಪಿರುವ ಘಟನೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ನಡೆದಿದೆ. ಆಕ್ಸಿಡೆಂಟ್ ರಭಸಕ್ಕೆ ಕಾರಲ್ಲಿದ್ದ ಐವರು ಜನರ ಅಸುನೀಗಿದ್ದಾರೆ.

 

ಇಬ್ಬರು ಮಹಿಳೆಯರು, 3 ಜನ ಪುರುಷರು ಮೃತಪಟ್ಟಿದ್ದಾರೆ.

 

ಮೃತರು ವಿಜಯಪುರ ತಾಲೂಕು ಅಲಿಯಾಬಾದ್ ನಿವಾಸಿಗಳು ಎಂದು ತಿಳಿದುಬಂದಿದೆ.

 

ಹುಣಸಗಿ ಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.

 

ಸ್ಥಳಕ್ಕೆ ತಾಳಿಕೋಟೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.

 

ತಾಳಿಕೋಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

ವರದಿ : ಮಹಿಬೂಬ್ ಗುಂತಕಲ್ 

error: Content is protected !!