ಮಲಪ್ರಭಾ ನದಿಯಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಸಾವು

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಮಲಪ್ರಭಾ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ನೀರುಪಾಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ದಿನಾಂಕ 08/12/2024 ರ ಮದ್ಯಾಹ್ನ 3.30ರ ಹೊತ್ತಿಗೆ ಪಟ್ಟಣದ ಮಲಪ್ರಭಾ ನದಿಯಲ್ಲಿ ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದ 14 ವರ್ಷದ ಹುಚ್ಚೇಶ ಕೆಲೂಡೆಪ್ಪ ಗೌಡರ ಹಾಗೂ ಕಮತಗಿ ಪಟ್ಟಣದ 12 ವರ್ಷದ ರಾಜು ಭೀಮಶಿ ಮಡಿಕೇರಿ ಎಂಬುವ ಬಡ ಮಕ್ಕಳು ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು. ವಿಷಯ ತಿಳಿದ ಹುನಗುಂದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ದಿನಾಂಕ 09/12/2024ರ ಬೆಳಿಗ್ಗೆ 7.30ಕ್ಕೆ ಇಬ್ಬರು ಮಕ್ಕಳ ಮೃತದೇಹ ಪತ್ತೆ ಮಾಡಿದ್ದಾರೆ. ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಾಗ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 

ವರದಿ: ಖಾಜಾಮೈನುದ್ದಿನ ತಹಶೀಲ್ದಾರ್

error: Content is protected !!