ಔರಾದ್ : ಅನ್ಯ ರಾಜ್ಯದ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ , ಟೆಂಪೋ ತಡೆದು ಪೊಲೀಸರು 203 ಅಕ್ಕಿ ಚೀಲಗಳು ಜಪ್ತಿ ಮಾಡಿಕೊಂಡಿದ್ದಾರೆ. ಖಚಿತ ಸುಳಿವಿನ ಮೇರೆಗೆ ಎಸ್ಪಿ ಪ್ರದೀಪ ಗುಂಟಿ, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ಸಿದ್ಧಲಿಂಗ ಹಾಗೂ ಆಹಾರ ಇಲಾಖೆ ನೀರಿಕ್ಷಕಿ ಪ್ರೇಮತಲಾ ಸೇರಿದಂತೆ ಸಿಬ್ಬಂದಿಗಳು ದಾಳಿ ನಡೆಸಿದರು.
ವಡಗಾಂವ (ದೇ) ಗ್ರಾಮದಿಂದ ಚಿಂತಾಕಿ ಕಡೆಗೆ ಸಂಚರಿಸುವ ಟೆಂಪೋವನ್ನು ಸುಂಕನಾಳ ಗ್ರಾಮದ ಕ್ರಾಸ್ ಬಳಿಯಲ್ಲಿ ತಡೆದು ಪಡಿತರ ಅಕ್ಕಿಯನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
3 ಲಕ್ಷ 45 ಸಾವಿರ 100 ರೂ.ಮೌಲ್ಯದ 101 ಕ್ವಿಂಟಲ್ 50 ಕೆಜಿ ಪಡಿತರ ಅಕ್ಕಿ ಹಾಗೂ 5 ಲಕ್ಷ ಮೌಲ್ಯದ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.
ಸಂಗಮೇಶ ಬಂಡೆಪ್ಪ ಕೊಟಗ್ಯಾಳೆ (35), ವೀರಶೇಟ್ಟಿ ಕಾಶೆಪ್ಪ ಜೋಳದಾಬಕೆ ( 42) ಎನ್ನುವವರಿಗೆ ಬಂದಿಸಿದ್ದಾರೆ. ತಲಾ 50 ಕೆಜಿಯ 203 ಚೀಲ ಅಕ್ಕಿ ಸಿಕ್ಕಿವೆ. ಆರೋಪಿಗಳಿಗೆ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.