ಬೀದರ್ ಜಿಲ್ಲೆ ಔರಾದ(ಬಾ) ತಾಲುಕಿನಲ್ಲಿ ಕುಡಿಯುವ ನೀರಿನ ಯೋಜನೆಯಾದ ಜೆ.ಜೆ.ಎಮ್. ಕಾಮಗಾರಿಯು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ ಮೀಷನ (ಜೆ.ಜೆ.ಎಮ್) ಕಾಮಗಾರಿ ಸಂಪೂರ್ಣ ರೀತಿಯಿಂದ ಕಳಪೆ ಮಟ್ಟದಿಂದ ಕೂಡಿರುತ್ತದೆ. ಸದರಿ ವಿಷಯವು ಅನೇಕ ಸಂಘ, ಸಂಘಟನೆ, ಮತ್ತು ಮಾಧ್ಯಮದಲಿ ಹಾಗೂ ಶಾಸಕರು ಕೂಡ ಕಳಪೆ ಮಟ್ಟದಿಂದ ಕಾಮಗಾರಿ ಕೂಡಿದೆ ಎಂದು ತಿಳಿಸಿರುವುದು ಜಗದಾಹಿರವಾಗಿದೆ ಅದರಂತೆಯೆ ತಾಲೂಕಿನ ವಡಗಾಂವ್, ಧೂಪತಮಹಾಗಾಂವ,
ಲಾಧಾ, ನಾಗೂರ(ಬಿ),ಕೋರೆಕಲ್
ಚೆಕ್ಲಿ(ಜಿ), ಸಂತಪೂರ, ಬೇಲೂರ, , ಮಣಿಗೆಂಪೂರ, ಮುಸ್ತಾಪೂರ ,ಕರಂಜಿ(ಬಿ), , ಸೋರಹಳ್ಳಿ, ಮುಂಗನಾಳ, ಮತ್ತು ಶೇಂಬೆಳ್ಳಿ, ಹಿಗೆ ವಿವಿಧ ಗ್ರಾಮಗಳಲ್ಲಿ ಸದರಿ ಯೋಜನೆಯ ಸಂಬಂಧಪಟ್ಟ ನೀರು ಮತ್ತು ನೈರ್ಮಲ್ಯಾ ಇಲಾಖೆ ಕಾರ್ಯನಿರ್ವಹಕ ಅಭಿಯಂತರರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮತ್ತು ಪಂಚಾಯತ ಅಭೀವೃದ್ಧಿ ಅಧಿಕಾರಿಗಳ ದಿವ್ಯ ನಿರ್ಲಕ್ಷತನದಿಂದ ತಮ್ಮ ಕರ್ತವ್ಯದಲ್ಲಿ ಲೋಪ ಎಸಗಿ ಸದರಿ ಯೋಜನೆಯು ಯೋಜನಾ ವರದಿಯಂತೆ ಮಾಡದೆ ಸಂಪೂರ್ಣವಾಗಿ ಕಾಮಗಾರಿಗಳು ಕಳಪೆ ಪಟ್ಟದಿಂದ ನಿರ್ವಹಿಸಿರುತ್ತಾರೆ. ಸದ್ಯ ಕೆಲವು ಹಳ್ಳಿಗಳಲ್ಲಿ ಕಾಮಗಾರಿಕೆಯೂ ಅರ್ಧದಲ್ಲೇ ನಿಲ್ಲಿಸಿದ್ದಾರೆ ಮತ್ತು ಜನರಿಗೆ ನಡೆಯುವುದಕ್ಕೆ ಬಹಳಷ್ಟು ತೊಂದರೆಯಾಗುತ್ತದೆ .
ಆದುದರಿಂದ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಕ ಅಭಿಯಂತರರು ಅಧಿಕಾರಿ ಗಳು ಎರಡು ಬಾರಿ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಅದರ ಪ್ರಯುಕ್ತ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಔರಾದ್ ತಾಲೂಕಿನ ತಹಸಿಲ್ ಕಚೇರಿಯ ಮುಂದೆ ಒಂದು ದಿನ ಸತ್ಯಾಗ್ರಹ ಧರಣಿ ಮಾಡಲಾಯಿತು. ಮತ್ತು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ತಂಡದ ವತಿಯಿಂದ ಮನವಿ ಪತ್ರವನ್ನು ತಸಿಲ್ದಾರ್ ಗ್ರೇಟ್2 ಸಂಗಯ್ಯ ಸ್ವಾಮಿ ,
C O ಮಾಣಿಕ್ ರಾವ್ ಪಾಟೀಲ್ ,ಹಾಗೂ AW ಸುಭಾಷ್ ದಾಲ್ ಗೊಂಡೆ ಅವರಿಗೆ ಮನವಿ ಪತ್ರ ನೀಡಲಾಯಿತು
ಇದೇ ಸಂದರ್ಭದಲ್ಲಿ
ಜಿಲ್ಲಾ ಕಾರ್ಯಕಾರಣಿ ಕಮಲ್ ಹಾಸನ್, ಜಿಲ್ಲಾ ಉಪಾಧ್ಯಕ್ಷರು ಅಂಬಾದಾಸ್ ಬೇಲೂರು, ತಾಲೂಕು ಅಧ್ಯಕ್ಷರು ಏಶಪ್ಪ ಧಪ್ಪೇ ತಾಲೂಕು ಗೌರವಾಧ್ಯಕ್ಷರು ವೆಂಕಟರಾವ್ ಪಾಟೀಲ್,
ಕಾರ್ಮಿಕ ಘಟಕ ತಾಲೂಕ ಅಧ್ಯಕ್ಷ ಶಿರೋಮಣಿ, ಸಿದ್ದಾರ್ಥ್ ಯೋಗಿ, ದಾವಿದ್ ಎಕಲಾರೆ, ರಾಮ್ ಲಾಧಾ ,ಆನಂದ್ ಶಂಬೆಳಿ,ಸುಕು, ಸಿಮನ್, ಸೋನು, ಲಖನ್ ಲಾದೇಕರ್, ಮುಂತಾದವರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ