ಪ್ರತಿವರ್ಷ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿ ಸೇವೆ ಶ್ಲಾಘಿಸುತ್ತಿರುವ ವಕೀಲರು
ಸಾರ್ವಜನಿಕ ರಜೆಗಳು ಹಬ್ಬ ಹರಿ ದಿನಗಳು ಭಾನುವಾರಗಳು ಹೀಗೆ ಯಾವುದನ್ನು ಪರಿಗಣಿಸದೆ ತಮ್ಮ ಕಾರ್ಯದಲ್ಲಿ ನಿರಂತರವಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿರುವ ಕೆಲಸ ಮಾಡುತ್ತಾರೆ. ಯಾವುದೇ ಒಂದು ನಗರ ಅಥವಾ ವಾರ್ಡ್ ಸ್ವಚ್ಛವಾಗಿರಲು ಕಾರಣ ಇವರ ಸೇವೆಯಾಗಿದೆ. ಕೋವಿಡ್ ಸಮಯದಲ್ಲೂ ಸಹ ಪೌರಕಾರ್ಮಿಕರು ನಿರಂತರವಾಗಿ ಕೆಲಸಮಾಡಿದರು. ಸಂದಿಗ್ದ ಸ್ಥಿತಿಯಲ್ಲೂ ನೈರ್ಮಲೀಕರಣಕ್ಕೆ ತಮ್ಮನ್ನು ತೊಡಗಿಸಿ ಕೊಂಡವರು ಅಂತವರು ಸೇವೆ ಸಮಾಜಕ್ಕೆ ಅನನ್ಯ. ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಅವರ ಸೇವೆಯನ್ನು ಪರಿಗಣಿಸಿ ವೃತ್ತಿಯಲ್ಲಿ ವಕೀಲರಾದ ಚಿತ್ರಗಾರ್ ರಾಜಕುಮಾರ್ ಅವರು ವಾರ್ಡ್ ನಂ.25 ಹಾಗೆ 24, 26ರ ಪೌರ ಕಾರ್ಮಿಕರಿಗೆ ಸೀರೆ ಹಣ್ಣು ನೀಡಿ ಸನ್ಮಾನಿಸಿದರು. ನಗರದ ಬಸವನಬಾವಿ ರಸ್ತೆಯ ಚಿತ್ರಗಾರ್ ರಾಜಕುಮಾರ್ ವಕೀಲರ ಮನೆಯ ಹತ್ತಿರ ಕಾರ್ಯಕ್ರಮ ನಡೆಯಿತು. ಕೆಎಂಸಿ ಅಕ್ತರ್, ಸೂಪರ್ವೈಸರ್ ವಿನೋದ್ ಕುಮಾರ್ ಅವರು ಉಪಸ್ಥಿತರಿದ್ದರು. ಜಿ ಟಿ ರೆಡ್ದಿ ವಕೀಲರು ಕಾರ್ಯಕ್ರಮದ ನಿರೂಪಣೆ ಮಾಡಿದರು.