ಖಿದ್ಮಾ ಫೌಂಡೇಶನ್ ಕರ್ನಾಟಕ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಹಿರಿಯ ಸಾಹಿತಿ, ದೂರದರ್ಶನ ವಿಶ್ರಾಂತ ಅಧಿಕಾರಿ ರಾ ಸು ವೆಂಕಟೇಶ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಯೂಸಫ್. ಹೆಚ್ .ಬಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಡಾ ಸುರೇಶ್ ಬಾಬು ಬಿ.ನ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡರು. ಪತ್ರಕರ್ತ ಸಿನಾನ್ ಇಂದಬೆಟ್ಟು ಕುವೆಂಪು ಮತ್ತು ವೈಚಾರಿಕತೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.ಡಾ. ಎಂ.ಎಂ ಭಾಷಾ ನಂದಿ ಮಾಡಿದರು ಸಂದೇಶ ಭಾಷಣ ಮಾಡಿದರು.ಡಾ.ಶಾಂತ ಜಯಾನಂದ್, ಕಾವ್ಯ ಎಸ್.ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಹಾಶಿಂ ಬನ್ನೂರು, ಅಮಿತಾ ಅಶೋಕ್ ಪ್ರಸಾದ್, ಬಸವರಾಜ್, ಸರಸ್ವತಿ ಎಲ್ ಮಂಜು ಹಾಗೂ ಮಂಜು ಟಿ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಅನ್ನದಾತ ಪ್ರಕಾಶನ ಸಂಸ್ಥೆಯ ಲೋಗೋ ಬಿಡುಗಡೆ ನಡೆಸಲಾಯಿತು. ಪೂಜಾ ಸಿ.ಐ ನಿರೂಪಿಸಿ, ತುನುಶ್ರೀ ಮಂಡ್ಯ ವಂದಿಸಿದರು ಎಂದು ಆಯೋಜಕ ಆಮಿರ್ ಅಶ್ಅರೀ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!