ಅಖಂಡ ಕರ್ನಾಟಕ ರೈಸ್ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಅವರ ನೇತೃತ್ವದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು
ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಮಲ್ಲಯ್ಯನ ಗುಡಿಯಲ್ಲಿ ಮಾಧ್ಯಮ ದೋಸ್ತಿ ಉದ್ದೇಶಿಸಿ ಮಾತನಾಡಿದಂತ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಅರವಿಂದ್ ಕುಲಕರ್ಣಿ ಅವರು ಬರ್ಮಾ ದೇಶದಿಂದ ತೊಗರಿ ಆಮದು ಮಾಡಿಕೊಂಡು ರೈತರನ್ನು ಹಾಳು ಮಾಡುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗೆ ಅಖಂಡ ಕರ್ನಾಟಕ ರೈತ ಸಂಘ ಖಂಡನೆ.
ಭಾರತದಲ್ಲಿಯೇ ಸಾಕಷ್ಟು ರೈತರು ತೊಗರಿ ಬೆಳೆ ಬೆಳೆಯುತ್ತಿದ್ದಾರೆ ವಿಶೇಷವಾಗಿ ಕರ್ನಾಟಕದ ಕಲಬುರ್ಗಿ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ತೊಗರಿ ಬೆಳೆದಿದ್ದಾರೆ. ನಮ್ಮ ರೈತರು ಬೆಳೆದ ತೊಗರಿಯನ್ನು ಕೇಂದ್ರ ಸರ್ಕಾರ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಿ ರೈತರಿಂದ ಖರೀದಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವದನ್ನು ಬಿಟ್ಟು ವಿದೇಶದಿಂದ (ಬರ್ಮಾ ದೇಶ) ತೊಗರಿ ಆಮದು ಮಾಡಿಕೊಂಡು ನಮ್ಮ ದೇಶದ ರೈತರನ್ನು ಕೇಂದ್ರ ಸರ್ಕಾರ ಮೂಲೆಗುಂಪು ಮಾಡಲು ಹೊರಟಿದೆ. ಇದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಆಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ಹೂವಿನ ಹಿಪ್ಪರಗಿಯಲ್ಲಿ ಕರೆದಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ತೊಗರಿ ಕಠಾವು ಮಾಡಿ ರಾಶಿ ಮಾಡುವ ಮುಂಚೆ ಪ್ರತಿ ಕ್ವಿಂಟಲ್ ತೊಗರಿಗೆ 12000 ರೂಗಳವರೆಗೆ ಮಾರುಕಟ್ಟೆ ದರ ಇತ್ತು. ಇನ್ನೇನು ರೈತರು ತೊಗರಿ ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ದಿಢೀರನೆ ಬೆಲೆ ಇಳಿಸಿ ಕೇವಲ 7550 ರೂಗಳಿಗೆ ಮಾರುಕಟ್ಟೆ ದರ ನಿಗದಿ ಮಾಡುವ ಮೂಲಕ ದೇಶದ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ. ತೊಗರಿ ಹಂಗಾಮು ಇಲ್ಲದಿದ್ದಾಗ ರೈತರ ಬಳಿ ತೊಗರಿಯೇ ಇಲ್ಲದ ಸಂದರ್ಭದಲ್ಲಿ ದರ ಹೆಚ್ಚಿಸಿದರೆ ರೈತರಿಗಾಗುವ ಪ್ರಯೋಜನವೇನು?. ಕೇವಲ ರೈತರನ್ನು ವಂಚಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಎಲ್ಲ ರಾಜಕೀಯ ಪಕ್ಷದವರು ಅಧಿಕಾರದಲ್ಲಿದ್ದಾಗ ಮಾತೆತ್ತಿದರೆ ನಾವು ರೈತರ ಮಕ್ಕಳು ನಾವು ರೈತರ ಪರವಾಗಿದ್ದೇವೆ ಎಂದು ಬೊಗಳೆ ಬಿಡುತ್ತ ರೈತ ಈ ದೇಶದ ಬೆನ್ನೆಲುಬು ರೈತರು ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತೇವೆ ಎಂದು ಕೇವಲ ಸಭೆಯಲ್ಲಿ ಭಾಷಣ ಬಿಗಿಯುತ್ತಾರೆ. ವಾಸ್ತವವಾಗಿ ಈ ದೇಶದ ಯಾವ ರಾಜಕೀಯ ಪಕ್ಷದವರಿಗೂ ರೈತರ ಮೇಲೆ ನೈಜ ಕಳಕಳಿ ಇಲ್ಲ. ಪ್ರತಿಯೊಂದು ವಿಷಯದಲ್ಲಿಯೂ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಗಲಾದರೂ ರೈತರು ಹಿಂತವರಿಂದ ಆಗುವ ಮೋಸ ವಂಚನೆಯಿಂದ ಏಚ್ಚೆತ್ತುಕೊಂಡು ಮುಂಬರುವ ದಿನಗಳಲ್ಲಿ ಇಂತಹ ರೈತ ವಿರೋಧಿ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ಈಗಲಾದರೂ ಕೇಂದ್ರ ಸರ್ಕಾರ ರೈತರ ಸಂಕಷ್ಟ ಅರಿತುಕೊಂಡು ಬೆಳೆದ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ 12000 ರೂಗಳಂತೆ,
ವರದಿ : ಮಹಿಬೂಬ್ ಗುಂತಕಲ್