ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ

ಮಲಗುಂದ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ: ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷೋದ್ಗಾರ…

 

ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

 

ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇವೇಂದ್ರಪ್ಪ ಹುಲ್ಲಾಳ ಅವಿರೋಧವಾಗಿ ಆಯ್ಕೆಯಾದರು. ಹಿಂದೆ ಅಧ್ಯಕ್ಷರಾಗಿದ್ದ ಬಿಜೆಪಿಯ ಸೋಮನಗೌಡ ಕಬ್ಬೂರ ವಿರುದ್ಧ ಇತ್ತೀಚಿಗೆ ಅವಿಶ್ವಾಸ ಮಂಡಿಸಲಾಗಿತ್ತು. ನೂತನ ಅಧ್ಯಕ್ಷರಾಗಿ ದೇವೇಂದ್ರಪ್ಪ ಹುಲ್ಲಾಳ ಆಯ್ಕೆ ಘೋಷಣೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

error: Content is protected !!