ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ

ಮಂಡ್ಯ: ಮ್ಯಾರಥಾನ್ ಅಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅನಿಕೇತನ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಡಾ. ರಾಮಲಿಂಗಯ್ಯ ಸಲಹೆ ನೀಡಿದರು.

ತಾಲೂಕಿನ ಕಾಳೇನಹಳ್ಳಿ ಗ್ರಾಮದ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವತಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಮತ್ತು ಬದುಕಿನಲ್ಲಿ ಗುರಿತಲುಪಲು ಮಹತ್ವಾಕಾಂಕ್ಷೆಯನ್ನು ಈ ಸ್ಪರ್ಧೆ ನೀಡುತ್ತದೆ ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾದದ್ದು ಇದು ಅವರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಮ್ಯಾರಥಾನ್ ಸ್ಪರ್ಧೆಯು ಕೊಡೆಯಾಲದಿಂದ ಅನಿಕೇತನ ಶಾಲೆಯವರೆಗೂ 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿ ಬಹುಮಾನಗಳಿಸಿದರು ಹೊರ ಜಿಲ್ಲೆಯಿಂದಲೂ ಕೂಡ ಸ್ಪರ್ದಾಳುಗಳು ಪಾಲ್ಗೊಂಡಿದ್ದರು ಈ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು..

ಗೆದ್ದಂತಹ ಸ್ಪರ್ಧಿಗಳಿಗೆ ಮೊದಲನೇ ಬಹುಮಾನ 3000 ನಗದು ಮತ್ತು ಟ್ರೋಫಿ ಎರಡನೇ ಬಹುಮಾನ 2000 ನಗದು ಮತ್ತು ಟ್ರೋಫಿ ಮೂರನೇ ಬಹುಮಾನ 1000 ನಗದು ಮತ್ತು ಟ್ರೋಫಿ ನಾಲ್ಕನೇ ಬಹುಮಾನ 500 ನಗದು ಮತ್ತು ಟ್ರೋಫಿ ಐದನೇ ಬಹುಮಾನ 400 ನಗದು ಮತ್ತು ಟ್ರೋಫಿ ಆರನೇ ಬಹುಮಾನ 300 ನಗದು ಮತ್ತು 7ನೇ ಬಹುಮಾನ 200 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಮಂಗಳಮ್ಮ ಮುಖ್ಯ ಶಿಕ್ಷಕಿ ತೇಜಸ್ವಿ ಶೈಕ್ಷಣಿಕ ಸಲಹೆಗಾರ ಹನುಮಂತ ಸ್ವಾಮಿ ದೈಹಿಕ ಶಿಕ್ಷಕರಾದ ಪಾರ್ಥೇಗೌಡ. ಉಷಾರಾಣಿ .ರಾಧ.ವಿನೋದ್ ಕುಮಾರ್. ಅಶೋಕ .ವೆಂಕಟೇಶ್ ಸಾಂಸ್ಕೃತಿಕ ಸಂಚಾಲಕರಾದ ಆಶಾ. ಶೋಭಾ. ಪುಟ್ಟೇಗೌಡ .ರಾಜು. ರಾಹುಲ್ ಭಾಗವಹಿಸಿದ್ದರು.

error: Content is protected !!