ಗೊಳಸಂಗಿ ಗ್ರಾಮದ ಪ್ರಗತಿಪರ ರೈತನ ಮಗಳ ವಿಶೇಷ ಸಾಧನ
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಪ್ರಗತಿಪರ ರೈತರಾದ ಹುಸೇನಬಾಷಾ.ಪಾಶಾಲಾಲ.ಹತ್ತರಕಿಹಾಳ ಇವರ ಸುಪುತ್ರಿಯಾದ ಅಮೀನಾ. ಹತ್ತರಕಿಹಾಳ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಕನ್ನಡ ವ್ಯಾಕರಣದಲ್ಲಿ ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿನಿಗೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಬಿ.ಕೆ.ತುಳಸಿಮಾಲಾ ಅವರು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ, ಇದು ಗೊಳಸಂಗಿ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಾರೆ.
ಗೊಳಸಂಗಿ ಗ್ರಾಮದ ಪ್ರಸಿದ್ಧ ಜಾನಪದ ಸಾಹಿತಿಯಾದ ಕಾ.ಹು.ಬಿಜಾಪುರ ಅವರ ಮೊಮ್ಮಗಳಾದ ಅಮೀನಾ ಅವರು ಅಜ್ಜನ ಮಾರ್ಗದಲ್ಲಿ ನಡೆದು ಕನ್ನಡ ಸಾಹಿತ್ಯದಲ್ಲಿ ಸಾಧನೆಗೈದು ಅಜ್ಜನ ಆಸೆಯನ್ನು ಈಡೇರಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿ, ಗೊಳಸಂಗಿ ಗ್ರಾಮದ ಕೀರ್ತಿ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾರ್ಥಿನಿಯ ಸಾಧನೆಗೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ನಾಗರಾಜ, ಪ್ರಾಧ್ಯಾಪಕರಾದ ಡಾ.ಮಹೇಶ.ಚಿಂತಾಮಣಿ,ಡಾ.ನಾರಾಯಣ.ಪವಾರ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಯುವಕರು ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.