ಸರಕಾರಿ ಪ್ರೌಢ ಶಾಲೆ ಭಂಡಾರಕುಮಟ ತಾ :ಔರಾದ (ಬಿ)ಶಾಲೆಯಲ್ಲಿ, 12ನೇ ಶತಮಾನದ ಕರ್ಮಯೋಗಿ, ಶಿವಯೋಗಿ ಸಿದ್ದರಾಮೇಶ್ವರ ಜಯಂತಿ &ಇಕೋ ಕ್ಲಬ್ ಕಾರ್ಯಕ್ರಮ ಜರುಗಿತು. ಗ್ರಾಮದ ಹಿರಿಯ ಜೀವಿ ಶ್ರೀರಂಗರಾವ್ ಭೈರಾಳೆ, ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಶಿವಮೂರ್ತಿ ಜೀರ್ಗೆ ಸಶಿ ಪ್ರಸ್ತಾವಿಕ ನುಡಿ ನುಡಿದರು. ಅತಿಥಿ ಶಿಕ್ಷಕ ಶ್ರೀಕಾಂತ ಶರಣರ ನಡೆ -ನುಡಿ ಒಂದಾಗಿಸಿಕೊಂಡು ಸಾರ್ಥಕ ಬದುಕು ಸಾಗಿಸಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಮುಶಿ ಚಂದ್ರಕಾಂತ ನಿರ್ಮಳೆ ಸಿದ್ದರಾಮೇಶ್ವರರು ಕರ್ಮಾಯೋಗಿ ಯಿಂದ ಶಿವಯೋಗಿಯಾದ ಬಗೆಯನ್ನು ತಿಳಿಸಿ, ವಿದ್ಯಾರ್ಥಿಗಳಿಗಾಗಿ ಇಕೋಕ್ಲಬ್ ಮಹತ್ವ, ಪರಿಸರ ಸಮೃದ್ಧಿ ಮಾಡುವುದರಿಂದ, ಸಮಾಜಕ್ಕಾಗುವ ಪ್ರಾಯೋಜನಗಳು, ಪ್ರತಿಯೊಬ್ಬ ವಿದ್ಯಾರ್ಥಿ ಜೀವಮಾನದಲ್ಲಿ ಕನಿಷ್ಠ ಇಪ್ಪತ್ತು ಸಸಿಗಳನ್ನು ನೆಟ್ಟಿ ಹೆಮ್ಮರಗಳನ್ನಾಗಿ ಮಾಡಬೇಕು ಎಂದು ಕಿವಿಮಾತು ತಿಳಿಸಿದರು. ಅಡುಗೆ ಸಿಬ್ಬಂದಿ, ಅತಿಥಿ ಶಿಕ್ಷಕರು, ಶಾಲಾಮಕ್ಕಳು ಪಾಲ್ಗೊಂಡರು. ಮೇತ್ರೆ ಮುರಳಿಧರ ಸ್ವಾಗತಿಸಿದರೆ, ಜ್ಯೋತಿ ಮಸ್ಕೆ ವಂದಿಸಿದರು.
ವರದಿ : ರಾಚಯ್ಯ ಸ್ವಾಮಿ
