ಬೀದರ್ : ನಡೆದ ಎಸಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ಗಿರಿ ವೆಂಕಟೇಶ್ ಎಂಬ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಶಿವಕುಮಾರ್ ಎಂಬ ಮತ್ತೊಬ್ಬ ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಹೈದ್ರಾಬಾದ್‌ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ,
ವಿಷಯ ತಿಳಿದ ಕೂಡಲೇ
ಅರಣ್ಯ, ಪರಿಸರ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಆಗಮಿಸಿ, ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶಿವಕುಮಾರ್ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ನಂತರ, ಚಿಕಿತ್ಸೆಯ ಕುರಿತು ವೈದ್ಯರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಚಿಕಿತ್ಸೆ ವೆಚ್ಚದ ಬಗ್ಗೆ ಯಾವುದೇ ಚಿಂತೆ ಮಾಡಬೇಡಿ ಎಂದು ಆಶ್ವಾಸನೆ ನೀಡಿದರು. ಶಿವಕುಮಾರ್ ಅವರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದರು ಮತ್ತು ಅವರ ಆರೋಗ್ಯದ ಸ್ಥಿತಿಗತಿಯನ್ನು ವಿವರವಾಗಿ ವಿಚಾರಿಸಿದರು.
ವೈದ್ಯರು ಶಿವಕುಮಾರ್ ಶೀಘ್ರ ಗುಣಮುಖರಾಗುವ ಬಗ್ಗೆ ಭರವಸೆ ನೀಡಿದ್ದಾರೆ. ಈ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ದುರಂತಕ್ಕೆ ಕಾರಣವಾದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಗಾಯಾಳು ಮತ್ತು ಮೃತರ ಕುಟುಂಬಗಳಿಗೆ ಅಗತ್ಯ ಸಕಾಲಿಕ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚಸಿದರು.
ಇದರ ಕುರಿತು ಕೆಲವು ಮಾಧ್ಯಮಗಳಲ್ಲಿ ಇಬ್ಬರು ಮೃತರ ನಿರಂತರ ವರದಿಯಾಗುತ್ತಿರುವುದು ಸುದ್ದಿ ನಿಖರ ಕಲೆ ಹಾಕದೆ ಸುಳ್ಳು ಸುದ್ದಿ ಹಾರಾಡುತ್ತಲೆದೆ ದರೋಡೆ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯವಾಗಿದ್ದು ಅದರಲ್ಲಿ ಗಿರಿ ವೆಂಕಟೇಶ್ ಎನ್ನುವವರು ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಇನ್ನೋರ್ವ ಶಿವಕುಮಾರ್ ಸಿಬ್ಬಂದಿಯವರು ಗಂಭೀರ ಗಾಯದಿಂದ ಹೈದ್ರಾಬಾದ್ ಕೇರ್ ಆಸ್ಪತ್ರೆಗೆ ದಾಖಲಾಗಿರುತ್ತದೆ ಆದರೆ ಇದರ ಬಗ್ಗೆ ದಾಳಿಯಲ್ಲಿ ಇಬ್ಬರು ಸಿಬ್ಬಂದಿ ಮೃತ್ತರಾಗಿರುತ್ತಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುತ್ತಲಾಯಿದ್ದು ನಗರದಲ್ಲಿ ಎಲ್ಲದೆ ಇಬ್ಬರ ಮೃತ್ತರ ಸಂದೇಶ ರವಾನೆಯಾಗಿದೆ ಇದರ ಕುರಿತು ನಮ್ಮ ಜೆಕೆ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಈಶ್ವರ್ ಖಂಡ್ರೆ ಅವರ ಆಪ್ತವರಿಗೆ ಫೊನ್ ಮುಖಾಂತರ ಕರೆ ಮಾಡಿ ಶಿವುಕುಮಾರ ಅವರ ಬಗ್ಗೆ ಸಚಿವರು ಭೇಟಿ ವಿಷಯ ಕುರಿತು ಮಾತಾಡಿದಾಗ ಆಸ್ಪತ್ರೆಯಲ್ಲಿ ಒಳ್ಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ವೈದ್ಯರು ಶೀಘ್ರದಲ್ಲೇ ಆರೋಗ್ಯದ ಭರವಸೆ ನೀಡಿದ್ದಾರೆ ಎಂದು ವರದಿಗಾರರಿಗೆ ಮಾಹಿತಿ ನೀಡಿದರು,
ಸತ್ಯ ಮಾಹಿತಿ ಕಲೆ ಹಾಕಿ ಸುದ್ದಿ ಮಾಡುವುದೇ ನಮ್ಮ ಜೆಕೆ ನ್ಯೂಸ್ ಕನ್ನಡ ದ ಕೆಲಸವಾಗಿದೆ.
ವರದಿ : ಪ್ರದೀಪ್ ಕುಮಾರ್ ದಾದನೂರ್