ಚಿಂಚೋಳಿ ತಾಲೂಕಿಗೆ ರೈಲ್ವೇ ಕಲ್ಪಿಸುವಂತೆ ಮನವಿ

ತಾಂಡುರು-ಚಿಂಚೋಳಿ-ಬೀದರ ಕಲಬುರಗಿ ರೈಲ್ವೇ ಸಂಪರ್ಕ ವಿಸ್ತರಿಸುವಂತೆ ಮನವಿ

ಬೀದರ ಕ್ಷೇತ್ರದ ಸಂಸದರಾದ ಸಾಗರ ಈಶ್ವರ ಖಂಡ್ರೆ ಚಿಂಚೋಳಿ ತಾಲೂಕು ರೈಲ್ವೇ ಸಂಪರ್ಕ ಕಲ್ಪಿಸುವಂತೆ ಯುವ ಕರ್ನಾಟಕ ವೇದಿಕೆ ಕಲಬುರಗಿ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು . ಚಿಂಚೋಳಿ ತಾಲೂಕಿನಿಂದ ಕಲಬುರಗಿ ರೈಲ್ವೇ ಮತ್ತು ಬೀದರ ರೈಲ್ವೇ ಸಂಪರ್ಕ 100 ಕಿ.ಮಿ ದೂರದಲ್ಲಿದ್ದು ದಿನ ನಿತ್ಯ ಪ್ರಯಾಣಿಕರು ರಸ್ತೆ ಮೂಲಕ ಪ್ರಯಾಣ ಮಾಡಬೇಕಾದರೆ 3.30 ಗಂಟೆ ಸಮಯ ಬೇಕಿದ್ದು ಆಸ್ಪತ್ರೆ ತುರ್ತು ಸೇವೆ, ಉದ್ಯೋಗಕ್ಕೆ, ಉನ್ನತ ಶಿಕ್ಷಣದ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಬೆಂಗಳೂರಿಗೆ ಪ್ರಯಾಣ ಮಾಡಬೇಕಾದರೆ ರೈಲ್ವೇ ಸಂಪರ್ಕ ಅತೀ ಅವಶ್ಯಕವಿದ್ದು ಚಿಂಚೋಳಿ ಜನತೆಗೆ ರೈಲ್ವೇ ಸಂಪರ್ಕ ಕಲ್ಪಿಸಿ ಜನ ಜೀವನ ಕಲಬುರಗಿ – ಬೀದರ ಹೋಗಲು ಸುಗಮ ಸಂಪರ್ಕ ವ್ಯವಸ್ಥೆ ಬಗ್ಗೆ ಮುಂದಿನ ಸಂಸದ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿಯನ್ನ ಯುವ ಕರ್ನಾಟಕ ವೇದಿಕೆ ಜಿಲ್ಲಾ ಘಟಕದ ಮತ್ತು ಚಿಂಚೋಳಿ ತಾಲೂಕು ವತಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿನ್ ಚವಾಣ್ ನವ ಕರ್ನಾಟಕ ವೇದಿಕೆ ಜಿಲ್ಲಾ ಅಧ್ಯಕ್ಷರು ಕಲಬುರಗಿ

ಯುವ ಕರ್ನಾಟಕ ವೇದಿಕೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು

ಹೀರಾ ಪವಾರ್ ಉಪ ಅಧ್ಯಕ್ಷರು . ಸಚಿನ್ ಸಿ ರಾಠೋಡ್ ತಾಲೂಕು ಅಧ್ಯಕ್ಷರು ಕಾಳಗಿ, ರಾಹುಲ್ ರಾಠೋಡ್ ರೈತ ಘಟಕ ಅಧ್ಯಕ್ಷರು . ಅರುಣ್ ರಾಠೋಡ್ ಯುವ ಘಟಕ ಅಧ್ಯಕ್ಷರು ಸದಾನಂದ್ ರಾಠೋಡ್ ಸಂಘಟನಾ ಕಾರ್ಯದರ್ಶಿ . ಆಕಾಶ್ ಪವಾರ್ ಸಂಚಾಲಕರು ಯುವ ಘಟಕ ಇತರರು ಉಪಸ್ಥಿತರಿದ್ದರು.

error: Content is protected !!