ರಾಮದುರ್ಗ,
ಕಳೆದ 12 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರಕಾರ ದೇಶದ ಬಂಡವಾಳಶಾಹಿಗಳ ಪರ ಕಾರ್ಮಿಕ ಕಾನೂನುಗಳನ್ನು ರೂಪಿಸಿ ದುಡಿಯುವ ಜನರ ಕೈಯಿಂದ ಈ ಹಿಂದೆ ಸಿಗುತ್ತಿದ್ದ ಸೌಲಭ್ಯಗಳನ್ನು ಕಸಿದುಕೊಂಡು ಮಾಲೀಕರ ಜೇಬು ತುಂಬಲು 4 ಹೊಸ ಸಂಹಿತೆಗಳನ್ನು ತಂದಿರುವುದು ಖೇದಕರ ಸಂಗತಿ ಎಂದು ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಮಾತನಾಡಿದರು.
ದೇಶದ ಹತ್ತು ಹಲವು ಸಂಘಟನೆಗಳು ಕೂಡಿ ಕರೆ ಕೊಟ್ಟಿರುವ ಅಖಿಲ ಭಾರತ ಮುಷ್ಕರದ ಭಾಗವಾಗಿ ತಹಶೀಲ್ದಾರ ಕಚೇರಿ ಮುಂದೆ ಇರುವ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನಾ ಸಭೆಯನ್ನು ಮಾಡಿದರು.
ಈ ಹಿಂದೆ ನೂರು ಜನ ಕಾರ್ಮಿಕರು ಕೆಲಸ ಮಾಡುತ್ತಿರುವಂತಹ ಕಂಪನಿ/ಪ್ರಾಕ್ಟರಿ ಮಾಲೀಕರಿಗೆ ನಷ್ಟವಾದರೆ ಅವರು ಸರಕಾರದ ಅನುಮತಿ ಪಡೆದು ಪ್ರಾಕ್ಷರಿ/ಕಂಪನಿ ಬಂದ್ ಮಾಡುವ ಕಾನೂನು ಇತ್ತು. ಈಗ ನಮ್ಮ ಪ್ರಧಾನ ಮಂತ್ರಿಗಳು 100 ಕಾರ್ಮಿಕರ ಬದಲಿ 300 ಜನ ಕಾರ್ಮಿಕರಿದ್ದರೆ ಸರಕಾರದ ಅನುಮತಿ ಪಡೆಯಬೇಕೆಂಬ ಕಾನೂನು ಬದಲಿಸಿದ್ದರಿಂದ ಮಾಲೀಕರು ಬೇಕಾದಾಗ ಕೆಲಸ ಕೊಡಬಹುದು. ಕೊಡದೆ ಇರಬಹುದು. ಇಂತಹ ಕಾರ್ಮಿಕ ವಿರೋಧಿ ಕಾನೂನು ನಮಗೆ ಬೇಡ! ಹಿಂದೆ 8 ಗಂಟೆ ಅವಧಿಗೆ ಕೆಲಸ ಮಾಡುವ ಕಾಯಿದೆ ಚಾಲನೆಯಲ್ಲಿತ್ತು ಈಗ 12 ಗಂಟೆ ಕೆಲಸ ಮಾಡಬೇಕೆಂಬ ಕಾನೂನು ತಂದು ಕಾರ್ಮಿಕರಿಗೆ ಕೇಂದ್ರ ಸರಕಾರ ಮೋಸ ಮಾಡಿದೆ ಎಂದು ಜೈನಖಾನ್ ಆಕ್ರೋಶ ವ್ಯಕ್ತಪಡಿಸಿದರು.
2004-05 రల్లి యుడిఎ సరకార మహిత్నా గాంధి రాష్ట్రీయ అంద్యూ?గ బాత్రి యాజన జాలిగ కందు ఆదళ్ళ ಒಂದು ಕಾಯಿದೆ ರೂಪಿಸಿ ಗ್ರಾಮೀಣ ಭಾಗದ ಜನರಿಗೆ ಗೂಳೆ ಹೋಗದಂತೆ ಕೆಲಸ ನೀಡಿದ್ದರು. ಈಗಿರುವ ಮೋದಿ ಸರಕಾರ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಿ ಇದಕ್ಕೆ ರಾಜ್ಯ ಸರಕಾರವು ಅನುದಾನ ನೀಡಬೇಕೆಂಬ ಷರತ್ತು ಹಾಕಿ ಕಾನೂನು ಮಾಡಿದೆ. ಕೃಷಿ ಚಟುವಟಿಕೆಗಳು ಇದ್ದಾಗ ಉದ್ಯೋಗ ಖಾತ್ರಿ ಯೋಜನೆ ಕೆಲಸ ನಿರಾಕರಿಸಿದೆ. ಇಂತಹ ಕಾನೂನು ನಮಗೆ ಬೇಡ! ಎಂದು ಕಾರ್ಮಿಕ ಮುಖಂಡ ನಾಗಪ್ಪ ಸಂಗೊಳ್ಳಿ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಇರಲಿ, ಕೇಂದ್ರ ಸರಕಾರ ಇರಲಿ ಯಾವುದೇ ಸರಕಾರ ಇವತ್ತು ಬಡವರ ಪರ ಕೆಲಸ ಮಾಡುತ್ತಿಲ್ಲ. ಸೂರು ಇಲ್ಲದೆ ನೂರಾರು ಕುಟುಂಬಗಳು ಬೀದಿಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಬದುಕುತ್ತಿವೆ. ಕೆಲವರು ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದಾರೆ. ಅಂತಹವರ ಬಗ್ಗೆ ಅನುಕಂಪ ತೋರಿಸದ ಸರಕಾರಗಳು ಅಂಬಾನಿ, ಆದಾನಿಯಂತಹ ಶ್ರೀಮಂತರಿಗೆ ಸಹಾಯ ಮಾಡುತ್ತಿರುವುದು ಖಂಡನೀಯ. ಇವತ್ತು ಸರಕಾರದಲ್ಲಿರುವ ಪಕ್ಷಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದನ್ನು ಜನ ಮನಗಂಡು ಜಾಗೃತರಾಗಬೇಕಾಗಿರುವ ಪರಿಸ್ಥಿತಿ ಬಂದಿದೆ. ಇದನ್ನು ಜನರು ಅರಿಯಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಬಿ.ಆರ್.ದೊಡಮನಿ, ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡ ಮಹಮ್ಮದಶಫಿ ಬೆಗ್ಗೆ ಇಂದಿರಾಗಾಂಧಿ ಲೇಬರ್ ಯೂನಿಯನ್ ನ ಗಣೇಶ ದೊಡಮನಿ, ಸಕ್ಕರೆ ಕಾರ್ಖಾಣೆ ಕಾರ್ಮಿಕರ ಸಂಘದ ಕೃಷ್ಣಾ ಹೊಸೂರ ಮುಂತಾದವರು ಮಾತನಾಡಿದರು.
ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿ ವಂದಿಸಿದರು. ಪಂಚಾಯತ ನೌಕರರ ಸಂಘದ ದಿಲೀಪ್ ಬೋವಿ, ಕೇಶವ ದಾಸರ, ವಿ.ಎನ್.ಕಂಪ್ಲಿ, ಅಂಗನವಾಡಿ ನೌಕರರ ಸಂಘದ ತಾಹೀರಾ ಮಕಾನದಾರ, ವಿಜಯಲಕ್ಷ್ಮೀ ಸಿದ್ದಿಬಾವಿ, ಅಕ್ಷರ ದಾಸೋಹ ಸಂಘಟನೆಯ ತುಳಸಮ್ಮ ಮಾಳದಕರ, ರಾಚಮ್ಮ ರಾಮದುರ್ಗ, ಕಟ್ಟಡ ಕಾರ್ಮಿಕರ ಸಂಘದ ಮಾರುತಿ ಮುದಗುರಿ, ಸಿಲ್ಲಿಂಗಪ್ಪ ಸಿಂಗಾರಗೊಪ್ಪ, ಪ್ರಾಂತ ರೈತ ಸಂಘದ ಗಿರಿಯಪ್ಪ ಬಂಡಿವಡ್ಡರ, ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಮಹಾಂತೇಶ మక్కామాసం, శివరాయ కణవి మత్తు వమాలి సంజనయ నాగరాజ మాదర, రివానంద మిలాని ముందవరు. ಭಾಗವಹಿಸಿದ್ದರು.
ವರದಿ Md ಸೋಹಿಲ್ ಭೈರಕದಾರ್ ಜೆಕೆ ನ್ಯೂಸ್ ಕನ್ನಡ ರಾಮದುರ್ಗ
