ಚಿಂಚೋಳಿ ತಾಲೂಕಿನ ದಲಿತ ಮುಖಂಡ ಹಾಗೂ ಸಮಾಜ ಸೇವಕರಾದ ಗೌತಮ ಬೊಮ್ಮನಳ್ಳಿ ಸಾಮಾಜಿಕ ಕ್ಷೇತ್ರದಿಂದ ಸಮಾಜ ಸೇವ ರತ್ನ ಪ್ರಶಸ್ತಿಗೆ ಬಾಜನರಾಗಿದ್ದಾರೆ, ಸದಾ ದೀನ ದಲಿತರ ಪರ ಬಡವರ ಪರ ಧ್ವನಿ ಎತ್ತಿ ಅನೇಕ ಹೋರಾಟಗಳನ್ನು ಮಾಡಿ ಯಶಸ್ವಿಗೊಳಿಸಿ ಬಡವರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಅದರಂತೆ ಅನೇಕ ನಿರ್ಗತಿಕರಿಗೆ ಧನಸಹಾಯ ಹಾಗೂ ದೌರ್ಜನ್ಯಕ್ಕೆ ಒಳಗಾದಂತಹ ವ್ಯಕ್ತಿಗಳ ಪರವಾಗಿ ನಿಂತು ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸಿ ಕೊಡಿಸಿರುವ ಇವರು ಸಕ್ರಿಯ ರಾಜಕಾರಣದಲ್ಲಿ ಇದ್ದು, ಸದಾ ಬಡಜನರ ಪಾಲಿನ ಆಶಾಕಿರಣ ದಂತೆ ಕೆಲಸ ನಿರ್ವಹಿಸುತ್ತಿದ್ದಾರೆ . ಇಂಥ ಒಳ್ಳೆ ಸೇವೆಗಳನ್ನು ಗುರುತಿಸಿ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ (ರಿ) ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಸಮಾಜ ಸೇವ ಕಾರ್ಯಕರ್ತ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಚನ್ನಯ್ಯ ವಸ್ತ್ರದ ತಿಳಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್
