ಬೋರ್ವೆಲ್ ಲಾರಿ ಲಾರಿಯೊಂದು ಚಲಿಸುತ್ತಿದ್ದಾಗ ಹಲಗತ್ತಿ ರಸ್ತೆ ಗ್ಯಾಸ್ ಕಚೇರಿ ಹತ್ತಿರ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಮುಗುಚಿ ಬಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿರಸ್ತೆನಲ್ಲಿ ನಡೆದಿದೆ.
ಲೋಕಾಪುರದಿಂದ ರಾಮದುರ್ಗ ಕಡೆಗೆ ಹೊರಟಿರುವ ಬೋರ್ವೆಲ್ ಲಾರಿ ಇದಾಗಿದ್ದು ರಾಮದುರ್ಗ ಕಡೆಗೆ ಬರುವ ಲಾರಿ ಎಂದು ಹೇಳಲಾಗಿದೆ ಹಲಗತ್ತಿ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಅವಘಡ ಸಂಭವಿಸಿದೆ, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ, ಇನ್ನು ಈ ಅಪಘಾತದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಭೀಕರ ರಸ್ತೆ ಅಪಘಾತ, ಪ್ರಪಾತಕ್ಕೆ ಮುಗುಚಿ ಬಿದ್ದ ಬೋರ್ವೆಲ್ ಲಾರಿ,ತಪ್ಪಿದ ಭಾರಿ ಅನಾಹುತ ಇಲ್ಲಿ ಒಂದು ಮನೇಕೋಡ್ ಇದೆ ಸ್ವಲ್ಪ ಇನ್ನು ಜೋರಾಗಿ ಲಾರಿ ಬಂದಿದರೆ ಮನೆಯಲ್ಲಿ ಇದ್ದ ಕುಟಂಬ ಮಸಣಕ್ಕೆ ಸೇರಬೇಕಾಗತಿತ್ತು.
ಈ ರಸ್ತೆ ಸರಿಯಾಗಿ ಉಪಯೋಗಿಸದೆ, ಸಾಕಷ್ಟು ತಿರುಗು ಹಾಗೂ ಇಕ್ಕಟ್ಟಾಗಿರುವ ಹಳೆಯ ರಸ್ತೆಯಲ್ಲಿ ಭಾರಿ ಗಾತ್ರದ ಸರಕು ತುಂಬಿದ ವಾಹನ ಓಡಿಸುವುದರ ಮೂಲಕ ಚಾಲಕರು ದುಸ್ಸಾಹಸಕ್ಕೆ ಮುಂದಾಗುತ್ತಿರುವುದು ವಿಪರ್ಯಾಸವೇ ಸರಿ.
ಇನ್ನೂ ಘಟನಾ ಸ್ಥಳಕ್ಕೆ ಹೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಎಂ.ಡಿ ಸೋಹೆಲ್ ಭೈರಕದಾರ್