ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಪದಾಧಿಕಾರಿಗಳು ಆಯ್ಕೆ

ಹುಕ್ಕೇರಿ : ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾದ ಮತಿನ ಕುಮಾರ್ ಅವರ ಆದೇಶ ಮೇರೆಗೆ ಇಂದು ಹುಕ್ಕೇರಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಭೀಮ್ ಆರ್ಮಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಕುಮಾರ್ ಕಡಟ್ಟಿ ಹಾಗೂ ಮೂಡಲಗಿ, ಘಟಪ್ರಭಾ ಮತ್ತು ಹಲವು ಗ್ರಾಮದ ಪದಾಧಿಕಾರಿಗಳ ಸಮೂಹಕದಲ್ಲಿ ಹುಕ್ಕೇರಿ ತಾಲೂಕ ಹನಮಂತ .ರ. ಅಕ್ಕನವರ್ ಇವರನ್ನು ಅಧ್ಯಕ್ಷತೆಯನ್ನು ಮಾಡಲಾಯಿತು ಎಂದು ಮಾಧ್ಯಮಗಳೊಂದಿಗೆ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಕುಮಾರ್ ಕಡಟ್ಟಿ ಅವರು ತಾಲೂಕ ಅಧ್ಯಕ್ಷರನ್ನ ಹಣಮಂತ .ರ. ಅಕ್ಕನವರ್ ಸನ್ಮಾನ್ ಸತ್ಕಾರದೊಂದಿಗೆ ಭೀಮ ಆರ್ಮಿ ಸಂಘಟನೆಯ ತಾಲೂಕ ಜವಾಬ್ದಾರಿ ನೀಡಲಾಯಿತು.

ಸಂವಿಧಾನ ಶಿಲ್ಪಿ ಡಾ ಬಿ. ಅರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಜೊತೆ ಡಾ ಬಿ. ಅರ್. ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಬದ್ಧರಾಗಿ ಈ ದೇಶದ ಮೂಲವಾಸಿ ಬಂಧುಗಳನ್ನು ಬಹುಜನ ಸಿದ್ದಾಂತದ ಮೇಲೆ ಒಂದಾಗಿಸಿ ಸಾಗುತ್ತಿರುವ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯನ್ನು ಹುಕ್ಕೇರಿ ತಾಲೂಕ ಹಾಗೂ ಗ್ರಾಮಗಳಲ್ಲಿ ಸಂಘಟನೆ ಬೆಳವಣಿಗೆ ಮಾಡಲಿಕ್ಕೆ ನಾವು ಭದ್ದರಿದ್ದೇವೆ ಡಾ ಬಿ. ಅರ್. ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ನಡೆಯುವೆವು ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಹನುಮಂತರವರು ಮಾಧ್ಯಮಗಳೊಂದಿಗೆ ಮಾತನಾಡಲಾಯಿತು.

ಅಶೋಕ ಅರ್ಜುನವಾಡ, ಅಜಿತ ಉದಗಟ್ಟಿ, ಭೀಮ ಆರ್ಮಿ ಮೂಡಲಗಿ ತಾಲೂಕ ಅಧ್ಯಕ್ಷರಾದ ಕಲ್ಮೀಶ್ ಜಾಲಬೆರಿ ಹಾಗೂ ಹಿರಿಯ ಪತ್ರಕರ್ತರಾದ ಶಿವಾಜಿ ಎನ್ ಬಾಲೇಶಗೋಳ, ಅಪ್ಪು ನ್ಯೂಸ್ ಸ್ಥಾಪಕರಾದ ಮಹೇಶ ಕಡಟ್ಟಿ, ಪ್ರವೀಣ ಈರಗಾರ, ವಿಕ್ರಮ ಈರಗಾರ, ಲಕ್ಕಪ್ಪ ಈರಗಾರ, ಶಿವಾನಂದ ದೊಡಮನಿ, ಅರುಣ ಹರಿಜನ, ಪ್ರಶಾಂತ್ ಪಾತ್ರೊಟ್, ಗಜಾನಂದ ಕೊಂಕಣಿ, ಶಾನೂರ ಬೂದಿಹಾಳ, ಭೀಮಷಿ ಗಾಡೀವಡ್ಡರ, ಜಗದೀಶ ಮಾದರ್ ಹಾಗೂ ಭೀಮ್ ಆರ್ಮಿ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಚ್

error: Content is protected !!