ಚಿತ್ತಾಪುರ ಪಟ್ಟಣದ ಅಂಬಿಗರ ಚೌಡಯ್ಯನವರ ವೃತ್ತದ ಆವರಣದಲ್ಲಿ ದಿ. ವಿಠ್ಠಲ್ ಹೇರೂರ ಅವರ 72ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಯಿತು
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪುರ ಮಾತನಾಡಿ, ಕೋಲಿ ಕಬ್ಬಲಿಗ ಸಮುದಾಯದ ಧೀಮಂತ ನಾಯಕ ವಿಠ್ಠಲ್ ಹೇರೂರ ಅವರು ತಮ್ಮ ಬದುಕಿನ ಉದ್ದಕ್ಕೂ ಸ್ವಾಭಿಮಾನದ ಜೀವನ ಕಟ್ಟಿಕೊಂಡು ಒಬ್ಬ ಬಂಡಾಯ ಬರಹಗಾರರಾಗಿದ್ದು ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಎಂದರು
ಇದೇ ವೆಳೆ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು
ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಪಿಎಸ್’ಐ ಶ್ರೀಶೈಲ್ ಅಂಬಾಟಿ, ನಾಗರಾಜ ಭಂಕಲಗಿ, ಭೀಮಣ್ಣ ಸೀಬಾ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವುಕುಮಾರ ಸುಣಗಾರ, ಗುಂಡು ಐನಾಪುರ, ಸಾಬಣ್ಣ ಭರಾಟೆ, ಮಲ್ಲಿಕಾರ್ಜುನ ಅಲ್ಲೂರಕರ್, ಗೂಳಿ ಡಿಗ್ಗಿ, ತಿಪ್ಪಣ್ಣ ಇವಣಿ, ಅಂಬು ಹೋಳಿಕಟ್ಟಿ, ರವಿ ದೊಡ್ಮನಿ, ಭೀಮು ಭಾಗೋಡಿ, ರಾಜು ಹೊಸ್ಸೂರ್ ಸೇರಿದಂತೆ ಇತರರು ಇದ್ದರು
ವರದಿ ಮೊಹಮ್ಮದ್ ಅಲಿ ಚಿತ್ತಾಪುರ