ಮೂರು ದಶಕಗಳಿಂದ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ನನ್ನನ್ನು ಪಕ್ಷದಿಂದ ಉಚ್ಛಾಟಿಸಿರುವುದು ವಿಶಾದನೀಯ-ಎಂ.ಡಿ. ರೌಫೋದ್ದಿನ್ ಕಛೇರಿವಾಲೆ

ಬೀದರ: ಕೇಂದ್ರ ಸರ್ಕಾರದಿಂದ ವಕ್ಫ ಅಧಿನಿಯಮ ತಿದ್ದುಪಡಿ ಮಾಡಲಾಗಿದ್ದು, ಪವಿತ್ರ ರಂಜಾನ ಹಬ್ಬ ದಿನಾಂಕ: 31-03-2025 ರಂದು ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಬೀದರ ನಗರದ ಈದಗಾ ಮೈದಾನದಲ್ಲಿ ಹೋಗಿರುವ ಸಂದರ್ಭದಲ್ಲಿ, ಅಲ್ಲಿ ಉಪಸ್ಥಿತಿರ ಇರುವ ಇತರರು ನಾನು ಭಾ.ಜ.ಪ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಪ್ರಯುಕ್ತ ಒತ್ತಾಯಪೂರ್ವಕವಾಗಿ ನನ್ನ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿರುತ್ತಾರೆ, ಪ್ರಾರ್ಥನೆ ಸಲ್ಲಿಸಿ ಸದರಿ ಕಪ್ಪು ಪಟ್ಟಿಯನ್ನು ಬಿಚ್ಚಿರುತ್ತೇನೆ. ಈ ಕುರಿತು ಕಾರಣ ಕೇಳುವ ನೊಟೀಸು ದಿನಾಂಕ: 18-04-2025 ರಂದು ವಾಟ್ಸಪ್ ಮುಖಾಂತರ ಜಾರಿ ಮಾಡಿ ಕಾರಣ ಕೇಳಲಾಗಿದ್ದು, ಸದರಿ ನೊಟೀಸಿನಲ್ಲಿ ಕಾಂಗ್ರೇಸ್ ಹಾಗೂ ಮುಸ್ಲಿಂ ಮುಖಂಡರ ಜೊತೆ ಸೇರಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಈ ಕುರಿತು ಸಮುಜಾಯಿಷಿಯನ್ನು ವಾಟ್ಸಪ್ ಮೂಲಕ ಪಕ್ಷದ ಜಾಲತಾಣಕ್ಕೆ ಸಮುಜಾಯಿಸಿಯನ್ನು ದಿ:19-04-2025 ಸಲ್ಲಿಸಿರುತ್ತೇನೆ ಹಾಗೂ ಲಿಖಿತ ರೂಪದಲ್ಲಿ ದಿನಾಂಕ: 26-04-2025 ರಂದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ಸ್ಪಷ್ಟೀಕರಣ ಸಲ್ಲಿಸಿರುತ್ತೇನೆ.
ಅದಾಗ್ಯೂ ಸಹ ಪತ್ರಿಕಾ ಪ್ರಕಟಣೆ ಹೊರಡಿಸಿ, ಪಕ್ಷದಿಂದ ಉಚ್ಛಾಟನೆ ಮಾಡಿರುವುದು ತೀರಾ ದುರಾದೃಷ್ಟಕರ ಸಂಗತಿಯಾಗಿದೆ, ಈ ಸಂಗತಿಯಿಂದ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆಂದು ಎಂ.ಡಿ. ರೌಫೋದ್ದಿನ್ ಕಛೇರಿವಾಲೆ ರವರು ದುಃಖ ವ್ಯಕ್ತಪಡಿಸಿದ್ದಾರೆ.

error: Content is protected !!