ಅನುಭವ ಮಟಂಪ ಗುರುಕುಲಕ್ಕೆ ಶೇ 100ರಷ್ಟು ಫಲಿತಾಂಶ
ಔರಾದ್ : ತಾಲೂಕಿನ ಸಂತಪುರ ನಗರದ ಅನುಭವ ಮಂಟಪ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ತೆಗೆದಿದ್ದಾರೆ. ಕಳೆದ 15 ವರ್ಷದಿಂದ ಶೇ 100 ರಷ್ಟು ಫಲಿತಾಂಶ ತೆಗೆಯುವ ಮೂಲಕ ಗಡಿ ಭಾಗದಲ್ಲಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ.
ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ವಿಧ್ಯಾರ್ಥಿಗಳು 65 ಆಗಿದ್ದು, ಅಗ್ರಶ್ರೇಣ ಯಲ್ಲಿ 29, ಪ್ರಥಮ ದರ್ಜೆಯಲ್ಲಿ 33, ದ್ವಿತೀಯ ದರ್ಜೆಯಲ್ಲಿ 03 ವಿದ್ಯಾರ್ಥಿಗಳು ಫಲಿತಾಂಶ ತೆಗೆದಿದ್ದಾರೆ.
ನಿವೇದಿತಾ ಸಂತೋಷ 98.72, ಕಾರ್ತಿಕ ಸಂಗನಬಸಯ್ಯ 98.56, ಐಶ್ವರ್ಯ ಪ್ರಭುಲಿಂಗ 98.40, ಸಿಂಚನಾ ಸತೀಶ 97.60, ಬಸವಶ್ರೀ ಸಂತೋಷ 97.60, ನಂದಿನಿ ರಾಮರಾವ 97.44, ಗಿರೀಶ ಬಸವರಾಜ 96.64, ಅಮೂಲ್ಯ ಮಹಾದೇವ 96.48, ವಿಜಯಲಕ್ಷ್ಮಿ ಚನ್ನಬಸಪ್ಪ 96.32, ಗಣೇಶ ಸಂಜೀವಕುಮಾರ 96.16, ಹರೀಶ ಸಂತೋಷ 96.16, ಸುದೀಪ ವಿಶ್ವನಾಥ 96, ನಿಖಿತಾ ಮಂಜುನಾಥ 95.84, ಪ್ರತಿಭಾ ಏಕನಾಥರಾವ 94.88, ಮಹಾದೇಶ ಸಿದ್ದಪ್ಪ 94.08, ಗಣೇಶ ವಿಶ್ವನಾಥ 94.08, ಬಸವಶ್ರೀ ಮಲ್ಲಿಕಾರ್ಜುನ 93.44, ಸಾಯಿಪ್ರಜ್ವಲ್ ಉಮಾಕಾಂತ 93.28, ಭಕ್ತಿ ಸಂತೋಷ 92.64, ಲಕ್ಷ್ಮೀ ಸಂದೀಪ 92.48 ಫಲಿತಾಂಶ ತೆಗೆದು ಉತೀರ್ಣರಾಗಿದ್ದಾರೆ. ಸಂಸ್ಥೆ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಗಡಿಭಾಗದ ಗ್ರಾಮೀಣ ಮಕ್ಕಳ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ. ಭಾಲ್ಕಿ ಶ್ರೀಗಳಾದ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ದೇವರು, ಹಿರಿಯ ಅಡಳಿತಾಧಿಕಾರಿ ಮೋಹನ ರೆಡ್ಡಿ, ಸ್ಥಾನಿಕ ಕಮಿಟಿ ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ಮುಖ್ಯಗುರು ಶಿವಕುಮಾರ ಹಿರೇಮಠ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ವಿಧ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸಾಧನೆಗೆ ಶ್ರೀಗಳ ಮೆಚ್ಚುಗೆ
ಗಡಿ ಭಾಗದ ಅನುಭವ ಮಂಟಪ ಶಾಲೆಯೂ ಕಳೆದ 15 ವರ್ಷಗಳಿಂದ ಸತತವಾಗಿ ಶೇ. 100 ರಷ್ಟು ಫಲಿತಾಂಶ ತೆಗೆಯುವ ಮೂಲಕ ಮಾದರಿ ಸಾಧನೆ ಮಾಡಿದೆ. ಶಿಕ್ಷಕರ ಪರಿಶ್ರಮ, ಪಾಲಕರ ಪ್ರೋತ್ಸಾಹದ ಜತೆಗೆ ಮಕ್ಕಳ ನಿರಂತರ ಅಧ್ಯಾಯನದಿಂದ ಮಾದರಿ ಫಲಿತಾಂಶ ತೆಗೆಯಲು ಸಾದ್ಯವಾಗಿದೆ. ಮಾದರಿ ಫಲಿತಾಂಶ ತೆಗೆದಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತೇನೆ ಎಂದು ಗುರುಬಸವ ಪಟ್ಟದ್ದೇವರು
ಪಿಠಾಧಿಪತಿ ಹಿರೇಮಠ ಸಂಸ್ಥಾನ ಭಾಲ್ಕಿ ಹೇಳಿದರು.
ವರದಿ : ರಾಚಯ್ಯ ಸ್ವಾಮಿ
