ಪ್ರೊಟೋಕಾಲ್ ಇಲ್ಲದ ಫ್ಲೆಕ್ಸ್ : ಬೀದರ್ ಯುವ ಕಾಂಗ್ರೆಸ್ ಕಾರ್ಯಕ್ರಮದ ಕೆಲವು ಬ್ಯಾನರ್ ಗಳಲ್ಲಿ ಸಿಎಂ ಡಿಸಿಎಂ ಫೋಟೋ ಮಾಯಾ

ಬೀದರ್ : ನಗರದಲ್ಲಿ ಇಂದು ಯುವ ಕಾಂಗ್ರೆಸ್ ವತಿಯಿಂದ ಬ್ರಹತ್ ಮಟ್ಟದ ಸಭೆ ಜರುಗಲಿದ್ದು ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ, ಬೀದರ್ ಯುವ ಕಾಂಗ್ರೆಸ್ ಉಸ್ತುವಾರಿ ಸೇರಿ ಹಲವರು ಸಭೆಗೆ ಆಗಮಿಸಿ ಯುವ ಕಾಂಗ್ರೆಸ್ ಕಾರ್ಯಕರ್ತ ರೊಡನೆ ಸಭೆ ನಡೆಸಲಿದ್ದಾರೆ ಈ ಸಭೆಯಲ್ಲಿ ಜಿಲ್ಲಾದ್ಯಂತ ದೂರದ ಊರುಗಳಿಂದ ಕಾರ್ಯಕರ್ತರು ಸೇರಲಿದ್ದಾರೆ ಆದರೆ ಬೀದರ್ ಯುವ ಕಾಂಗ್ರೆಸ್ ನಲ್ಲಿ ಎರೆಡು ಬಣ ಗಳಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಇಲ್ಲಿನ ಕೆಲವು ಬ್ಯಾನರ್ ಗಳಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಫೋಟೋಗಳೇ ಹಾಕದೆ ಇರುವುದು ಕಂಡು ಬಂದಿದೆ ಹಾಗೂ ಸಿಎಂ ಡಿಸಿಎಂ ಫೋಟೋ ಗಳು ಕೂಡ ಬ್ಯಾನರ್ ನಲ್ಲಿ ಕಂಡು ಬಂದಿಲ್ಲ ಯುವ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಪ್ರದರ್ಶನ ವಾಗುತ್ತಿಲ್ಲ ಎರೆಡು ಬಣ ಗಳಾಗಿವೆ ಜಿಲ್ಲೆಯಲ್ಲಿ ಇದರಿಂದೇನು ಪಕ್ಷಕ್ಕೆ ಲಾಭವಾಗಬಹುದು ಎಂದು ಸಾರ್ವಜನಿಕರ ಚರ್ಚೆಗೆ ಕಾರಣ ವಾಗಿದೆ.

error: Content is protected !!